ನಿಮ್ಮ ಗೆಸ್ಟ್‌ಗಳನ್ನು ಸ್ವಾಗತಿಸಲು ತುಸು ಹೆಚ್ಚು ಶ್ರಮಪಡುವುದು
ವಿಶೇಷ ಆಕರ್ಷಣೆಗಳು
ಮೆಚ್ಚುಗೆಯ ಒಂದು ಸಣ್ಣ ದ್ಯೋತಕವು ಗೆಸ್ಟ್‌ಗಳಿಗೆ ವಿಶೇಷವಾದ ಅನುಭವವನ್ನು ನೀಡುವಲ್ಲಿ ಬಹಳ ಸಹಾಯ ಮಾಡುತ್ತದೆ
ವೈಯಕ್ತಿಕ ಸ್ಪರ್ಶಕ್ಕಾಗಿ ಕೈಬರಹದ ಟಿಪ್ಪಣಿಯನ್ನು ಇರಿಸಲು ಪ್ರಯತ್ನಿಸಿ
ನೀವು ಹೂವುಗಳು, ಪಾನೀಯಗಳು, ಕುರುಕಲು ತಿನಿಸುಗಳು ಮತ್ತು ಇತರ ತಿನಿಸುಗಳನ್ನು ಇರಿಸುವ ಮೂಲಕ ಇನ್ನೂ ಹೆಚ್ಚಿನದನ್ನು ಮಾಡಬಹುದು
ಸ್ಥಳೀಯ ಉತ್ಪನ್ನಗಳು ನಿಮ್ಮ ಸಮುದಾಯವನ್ನು ಬೆಂಬಲಿಸಬಹುದು—ಮತ್ತು ಗೆಸ್ಟ್‌ಗಳು ಆತ್ಮೀಯ ಭಾವನೆಯನ್ನು ಹೊಂದಲು ಸಹಾಯ ಮಾಡಬಹುದು
ಕೈಬರಹದ ಟಿಪ್ಪಣಿ ಅಥವಾ ತಾಜಾ ಹೂವುಗಳ ಪುಷ್ಪಗುಚ್ಛಕ್ಕಿಂತ ಗೆಸ್ಟ್‌ಗಳಿಗೆ ಹೆಚ್ಚು ಸ್ವಾಗತಾರ್ಹವೆನ್ನಿಸುವಂತಹವು ಯಾವುದೂ ಇಲ್ಲ. ಮತ್ತು ಗೆಸ್ಟ್‌ಗಳು ಸ್ಮರಣೀಯ ತಂಗುವಿಕೆಯನ್ನು ಹೊಂದಿದಾಗ, ಅವರು ಮಿನುಗುವ ವಿಮರ್ಶೆಗಳನ್ನು ನೀಡುವ, ನಿಮ್ಮ ಸ್ಥಳದ ಬಗ್ಗೆ ಅವರ ಸ್ನೇಹಿತರು ಮತ್ತು ಕುಟುಂಬಕ್ಕೆ ತಿಳಿಸುವ ಹಾಗೂ ಮರು ಭೇಟಿಗಾಗಿ ಹಿಂದಿರುಗುವ ಸಾಧ್ಯತೆಗಳು ಹೆಚ್ಚು.
ನಿಮ್ಮ ಗೆಸ್ಟ್‌ಗಳನ್ನು ಬೆಚ್ಚಗಿನ ಶುಭಾಶಯದಿಂದ ಸಂತೋಷಪಡಿಸುವುದರಿಂದ ಅವರಿಗೆ ಖುಷಿ ಅನ್ನಿಸಬಹುದು, ಅದಕ್ಕೆ ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಚಿಂತನಶೀಲ ಟಿಪ್ಪಣಿಗಳಿಂದ ಹಿಡಿದು ಹೊಸದಾಗಿ ಬೇಕ್ ಮಾಡಿದ ತಿನಿಸುಗಳವರೆಗೆ, ಪ್ರಪಂಚದಾದ್ಯಂತದ ಕೆಲವು ಹೋಸ್ಟ್‌ಗಳು ತಮ್ಮ ಗೆಸ್ಟ್‌ಗಳನ್ನು ಸ್ವಾಗತಿಸುವಲ್ಲಿ ಹೇಗೆ ಮೇಲುಗೈ ಸಾಧಿಸಿದ್ದಾರೆ ಎಂಬುದು ಇಲ್ಲಿದೆ:
1. ಸ್ನೇಹಪರ ಸ್ವಾಗತ ಟಿಪ್ಪಣಿಯನ್ನು ಬರೆಯಿರಿ
ಗೆಸ್ಟ್‌ಗಳು ಪ್ರವಾಸದಲ್ಲಿರುವಾಗ, ಅವರಿಗೆ ಮನೆ ನೆನಪಾಗುತ್ತಿರುವುದಕ್ಕೂ ಮತ್ತು ಮನೆಯಲ್ಲೇ ಇರುವಂತೆ ಅನ್ನಿಸುವುದಕ್ಕೂ ನಡುವಿನ ವ್ಯತ್ಯಾಸವನ್ನು ಈ ರೀತಿಯ ವೈಯಕ್ತೀಕರಿಸಿದ ಸ್ವಾಗತಗಳು ತರಬಲ್ಲವು. "ನಾನು ಪ್ರತಿ ಕೋಣೆಯಲ್ಲಿ ಸಣ್ಣ ಚಾಕ್‌ಬೋರ್ಡ್ ಅನ್ನುಇರಿಸಿದ್ದೇನೆ, ಅದು ಗೆಸ್ಟ್‌ಗಳನ್ನು ಸ್ವಾಗತಿಸುತ್ತದೆ ಮತ್ತು ನಾನು ಪ್ರತಿ ಬಾರಿಯೂ ಅಲ್ಲಿ ಅವರನ್ನು ಹೆಸರಿಸಿರುತ್ತೇನೆ," ಎಂದು ಲಂಡನ್‌ನ ಹೋಸ್ಟ್ ಹುಮಾ ಹೇಳುತ್ತಾರೆ. "ಇದು ಒಂದು ಸಣ್ಣ ಪ್ರಯತ್ನವಾದರೂ, ಅವರು ಇದನ್ನು ನಿಜವಾಗಿಯೂ ಇಷ್ಟಪಡುತ್ತಾರೆ."
ನೀವು ಅದೇ ಭಾವನೆಯನ್ನು ಕೈಬರಹದ ಟಿಪ್ಪಣಿಯಲ್ಲಿಯೂ ಬರೆದಿರಿಸಬಹುದು. "ನಾನು ಇತ್ತೀಚೆಗೆ ಸ್ವಾಗತದ ಕಾರ್ಡ್ ಜೊತೆ ಪುಟ್ಟ ತಿನಿಸನ್ನು ನೀಡಲು ನಿರ್ಧರಿಸಿದೆ," ಎಂದು ಸ್ವೀಡನ್‌ನ ಎಡ್ಸ್‌ಬರ್ಗ್‌ನಲ್ಲಿನ ಹೋಸ್ಟ್ ಟ್ರುಡ್ ಹೇಳುತ್ತಾರೆ. ನಿಮ್ಮ ಟಿಪ್ಪಣಿಯಲ್ಲಿ ನೀವು, ಒಳ್ಳೆಯ ಕಾಫಿ ಸಿಗುವ ನಿಮ್ಮ ನೆಚ್ಚಿನ ಸ್ಥಳದ ಕುರಿತು ಅಥವಾ ನಿಮ್ಮ ಪ್ರದೇಶದ ಬಗ್ಗೆ ಒಂದು ಮೋಜಿನ ಸಂಗತಿಯ ಕುರಿತು ಸೇರಿಸಬಹುದು.
2. ನಿಮ್ಮ ಪಟ್ಟಣದ ರುಚಿಯನ್ನು ನಿಮ್ಮ ಗೆಸ್ಟ್‌ಗಳಿಗೆ ಒದಗಿಸಿ
ನಿಮ್ಮ ಗೆಸ್ಟ್‌ಗಳು ನೆಲೆಗೊಳ್ಳಲು ಸಹಾಯ ಮಾಡುವ ಒಂದು ಅತ್ಯುತ್ತಮ ವಿಧಾನವೆಂದರೆ, ಅವರನ್ನು ನಿಮ್ಮ ನೆರೆಹೊರೆಯ ಉನ್ನತ ತಾಣಗಳಿಗೆ ಪರಿಚಯಿಸುವುದು. "ಇಲ್ಲಿನ ಸ್ಥಳೀಯ ಬೇಕರಿಯೊಂದರಲ್ಲಿ ನನಗೆ ಇಷ್ಟದ ಸಿನಾಮೋನ್ ಕ್ರೀಮ್ ಕೇಕ್ ಸಿಗುತ್ತದೆ, ನಾನು ಒಂದು ಕೇಕನ್ನು ನನ್ನ ಮೊದಲ ಗೆಸ್ಟ್‌ಗೆ ತಂದಿದ್ದೆ" ಎನ್ನುತ್ತಾರೆ, ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದ ಹೋಸ್ಟ್ ಡೇವಿಡ್. ಅವರು ಈಗ ತಮ್ಮ ಎಲ್ಲ ಗೆಸ್ಟ್‌ಗಳಿಗೆ ತಮ್ಮ ಆ ನೆಚ್ಚಿನ ಕೇಕ್ ತಂದು ನೀಡುತ್ತಾರೆ.
3. ನಿಮ್ಮ ಸ್ವಂತ ಅಡುಗೆ ಕೌಶಲ್ಯಗಳನ್ನು ಬಳಸಿ
ನೀವು ಬೇಕಿಂಗ್ ಪರಿಣತರಾಗಿದ್ದರೆ, ಗೆಸ್ಟ್‌ಗಳಿಗಾಗಿ ನಿಮ್ಮ ವಿಶೇಷ ತಿನಿಸುಗಳನ್ನು ತಯಾರಿಸುವ ಮೂಲಕ ನಿಮ್ಮ ಆತಿಥ್ಯ ಕೌಶಲ್ಯಗಳನ್ನು ಅವರಿಗೆ ತೋರ್ಪಡಿಸಿ. "ನಾನು ಕೆಲವು ಮನೆಯಲ್ಲಿ ತಯಾರಿಸಿದ ಕುಕೀಗಳನ್ನು ಇರಿಸಲು ಪ್ರಾರಂಭಿಸಿದೆ," ಎಂದು ಬ್ರೆಜಿಲ್‌ನ ರೊರೈಮಾದ ಹೋಸ್ಟ್ ಬೆತ್ ಹೇಳುತ್ತಾರೆ. "ನಾನು ಸಾಕಷ್ಟು ರಿಟರ್ನ್ ವ್ಯವಹಾರವನ್ನು ಪಡೆಯುತ್ತೇನೆ ಮತ್ತು ಕುಕೀಗಳ ಕುರಿತು ಅನೇಕ ಬಾರಿ ಉತ್ತಮ ಕಾಮೆಂಟ್‌ಗಳನ್ನೂ ಪಡೆದಿದ್ದೇನೆ."
4. ನಿಮ್ಮ ಗೆಸ್ಟ್‌ಗಳನ್ನು ತೊಡಗಿಸಿಕೊಳ್ಳಿ
ಟೆಕ್ಸಾಸ್‌ನ ಸ್ಯಾನ್ ಆಂಟೊನಿಯೊದ ಹೋಸ್ಟ್ ಡೇವಿಡ್ ಅವರು ಗೆಸ್ಟ್‌ಗಳಿಗೆ ಸಿಹಿ ತಿನಿಸು ನೀಡುವುದರ ಜೊತೆಗೆ, ಅವರಿಗಾಗಿ ವೈನ್ ಕೂಡ ಇರಿಸುತ್ತಾರೆ. ತಾವು ಆನಂದಿಸಿದ ಬಾಟಲ್ ಅನ್ನು ಹೊಸದರೊಂದಿಗೆ ಬದಲಾಯಿಸಲು ಗೆಸ್ಟ್‌ಗಳನ್ನು ಪ್ರೋತ್ಸಾಹಿಸುವ ಡೇವಿಡ್ ಅವರು ಅದಕ್ಕಾಗಿ “ಹ್ಯಾಶ್‌ಟ್ಯಾಗ್: #takeabottleleaveabottle ಇದೆ” ಎನ್ನುತ್ತಾರೆ. ಕಾಲಕ್ರಮೇಣ ಸಂಗ್ರಹವು ಬೆಳೆದಿದೆ: “ಗೋಡೆಯಲ್ಲಿ ಈಗ ಐದು ಭಿನ್ನ ರೀತಿಯ ವೈನ್‌ಗಳಿವೆ” ಎಂದು ಅವರು ಹೇಳುತ್ತಾರೆ. ಒಂದನ್ನು ತೆಗೆದುಕೊಳ್ಳಿ, ಒಂದನ್ನು ಇರಿಸಿ ಐಡಿಯಾ ಇದನ್ನು ಕೈಗೆಟುಕುವ ಆಯ್ಕೆಯನ್ನಾಗಿ ಮಾಡಿದೆ. ಇದನ್ನು ನೀವು ಪುಸ್ತಕಗಳ ಜೊತೆಗೂ ಪ್ರಯತ್ನಿಸಬಹುದು!
5. ಸ್ನ್ಯಾಕ್ ಬಾಸ್ಕೆಟ್ ರಚಿಸಿ
"ಜನರು ಉತ್ತಮವಾಗಿ ಸಮಯ ಕಳೆಯಲು ಬರುತ್ತಾರೆ ಎಂದು ನಮಗೆ ತಿಳಿದಿದೆ," ಎಂದು ಅಟ್ಲಾಂಟಾದ ಹೋಸ್ಟ್ ಜೆರ್ರಿ ಹೇಳುತ್ತಾರೆ. "ಬಹಳಷ್ಟು ಬಾರಿ ಅವರು ಮನೆಗೆ ಹಿಂತಿರುಗಿದ ನಂತರ ಮಂಚೀಸ್ ಸವಿಯುತ್ತಾರೆ." ಆದ್ದರಿಂದ ಅವರು ಈಗ ಮೈಕ್ರೊವೇವ್ ಪಾಪ್‌ಕಾರ್ನ್, ಕುಕೀಸ್, ಆಲೂಗಡ್ಡೆ ಚಿಪ್ಸ್ ಮತ್ತು ಪ್ರೆಟ್ಜೆಲ್‌ಗಳಂತಹ ತಿಂಡಿಗಳ ಬಾಸ್ಕೆಟ್ ಅನ್ನು ತಮ್ಮ ಅಡುಗೆಮನೆಯಲ್ಲಿ ಇರಿಸುತ್ತಾರೆ.
6. ನಿಮ್ಮ ಟ್ರೀಟ್‌ಅನ್ನು ಕಸ್ಟಮೈಸ್ ಮಾಡಿ
ನಿಮ್ಮ ಗೆಸ್ಟ್‌ಗಳ ಬಗ್ಗೆ ತಿಳಿದುಕೊಳ್ಳಿ, ಅವರ ಅಗತ್ಯಗಳಿಗೆ ಗಮನ ನೀಡಿ. "ನಾವು ಚೆಕ್-ಇನ್ ಸಮಯದಲ್ಲಿ ಒಂದು ಟ್ರೀಟ್ ಅನ್ನು ನೀಡುತ್ತೇವೆ" ಎಂದು ಮೇರಿಲ್ಯಾಂಡ್‌ನ ಫ್ರೆಡೆರಿಕ್‌ನ ಹೋಸ್ಟ್ ಲಾರಾ ಹೇಳುತ್ತಾರೆ. "ಕೆಲವೊಮ್ಮೆ ಇದು ಸ್ಥಳೀಯ ಚೀಸ್, ಚಾಕೊಲೇಟ್ ಅಥವಾ ಬೇಕ್ ಮಾಡಿದ ತಿಂಡಿಗಳಾಗಿರುತ್ತವೆ. ಕೆಲವೊಮ್ಮೆ ಇದು ಸ್ಥಳೀಯ ಬಿಯರ್ ಅಥವಾ ವೈನ್ ಬಾಟಲಿಯಾಗಿರುತ್ತದೆ." ಆಕೆ ಮೊದಲು ತಮ್ಮ ಗೆಸ್ಟ್‌ಗಳ ಯಾವುದೇ ಆಹಾರ ನಿರ್ಬಂಧಗಳ ಬಗ್ಗೆ ತಿಳಿದುಕೊಳ್ಳಲು ಅವರಿಗೆ ಸಂದೇಶ ಕಳುಹಿಸುತ್ತಾರೆ: "ಎಲ್ಲರೂ ಮದ್ಯ ಸೇವಿಸುವುದಿಲ್ಲ ಅಥವಾ ಚೀಸ್ ತಿನ್ನುವುದಿಲ್ಲ, ಅದಕ್ಕೆ ನಾನು ಕೇಳುತ್ತೇನೆ."
ನಿಮ್ಮ ಗೆಸ್ಟ್‌ಗಳು ಮಕ್ಕಳನ್ನು ಹೊಂದಿದ್ದರೆ, ಸ್ಟಿಕ್ಕರ್‌ಗಳ ಪ್ಯಾಕೆಟ್ ಅಥವಾ ಕೆಲವು ಜ್ಯೂಸ್ ಬಾಕ್ಸ್‌ಗಳು ಸಂತಸ ನೀಡುವ ಅಚ್ಚರಿಗಳಾಗಬಹುದು. "ಮಕ್ಕಳಿದ್ದರೆ, ನಾನು ಲಾಲಿಪಾಪ್ ಅಥವಾ ಸಣ್ಣ ಕ್ಯಾಂಡಿ ಬ್ಯಾಗ್ ಮತ್ತು ಸಣ್ಣ ಕ್ರೇಯಾನ್ ಬಾಕ್ಸ್ [ಜೊತೆಗೆ] ಕಲರಿಂಗ್ ಪುಸ್ತಕ ಇರಿಸುತ್ತೇನೆ," ಎಂದು ನ್ಯೂಯಾರ್ಕ್ ನಗರದ ಹೋಸ್ಟ್ ಆ್ಯನ್ ಹೇಳುತ್ತಾರೆ. ಮತ್ತು ನಿಮ್ಮ ಗೆಸ್ಟ್‌ಗಳು ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸುತ್ತಿದ್ದರೆ, ಅವರ ಮುದ್ದಿನ ಪ್ರಾಣಿ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಡಾಗ್ ಟ್ರೀಟ್‌ಗಳನ್ನು ನೀಡುವುದನ್ನು ಪರಿಗಣಿಸಿ.
7. ನಿಮ್ಮ ಸ್ಥಳೀಯ ಸಂಸ್ಕೃತಿಯನ್ನು ಪ್ರದರ್ಶಿಸಿ
ನಿಮ್ಮ ಪ್ರದೇಶದಲ್ಲಿ ಯಾವುದಾದರೂ ಅಗ್ಗವಾದದ್ದಿದ್ದರೆ—ಉದಾಹರಣೆಗೆ ಹವಾಯಿಯಲ್ಲಿ ವಿಶಿಷ್ಟ ಹೂವಿನ ಮಾಲೆ—ನಿಮ್ಮ ಗೆಸ್ಟ್‌ಗಳಿಗೆ ಚೆಕ್-ಇನ್ ವೇಳೆ ಖುಷಿಪಡಿಸಲು ಅಂತಹವು ಏನನ್ನಾದರೂ ಇಟ್ಟಿರುವುದನ್ನು ಪರಿಗಣಿಸಿ. "ನಾವು ಇಲ್ಲಿ ಹೆಚ್ಚಾಗಿ ಒದಗಿಸುವ ಅಂತಹ ಸಂಗತಿ ಎಂದರೆ, ಮರ್ಡಿ ಗ್ರಾಸ್ ಮಣಿಹಾರಗಳು" ಎನ್ನುತ್ತಾರೆ, ನ್ಯೂ ಓರ್ಲಾನ್ಸ್‌ನ ಹೋಸ್ಟ್ ಜೋರ್ಡಾನ್. ಗೆಸ್ಟ್‌ಗಳು ಇಂತಹ ಸ್ಮರಣಿಕೆಗಳನ್ನುಇಷ್ಟಪಡುತ್ತಾರೆ, ಇದು ಚೆಕ್‌ಔಟ್ ಬಳಿಕ ಬಹಳ ಸಮಯದ ನಂತರ ಕೂಡ ತಮ್ಮ ವಾಸ್ತವ್ಯವನ್ನು ನೆನಪಿಟ್ಟುಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.
8. ಪ್ರಕೃತಿಯಿಂದ ಸ್ವಲ್ಪ ಸಹಾಯ ಪಡೆಯಿರಿ
ತಾಜಾ ಹೂವುಗಳಿಂದ ಮನೆಯಲ್ಲಿ ಬೆಳೆದ ತರಕಾರಿಗಳವರೆಗೆ, ಗೆಸ್ಟ್‌ಗಳು ಅದ್ಭುತ ಹೊರಾಂಗಣಗಳನ್ನು ಇಷ್ಟಪಡುತ್ತಾರೆ. “ಗೆಸ್ಟ್ ರೂಮ್‌ಗೆ ನನ್ನ ಉದ್ಯಾನದಿಂದ ನಾನು ಆಕರ್ಷಕ ಪುಷ್ಪಗುಚ್ಛವನ್ನು ಆರಿಸುತ್ತೇನೆ” ಎಂದು ಮೆಕ್ಸಿಕೋದ ಸಯುಲಿಟಾದ ಹೋಸ್ಟ್ ಸಾರಾ ಹೇಳುತ್ತಾರೆ. ತೋಟದಿಂದ ತಾಜಾ ಹಣ್ಣು ಅಥವಾ ತರಕಾರಿಗಳು ಸಹ ಚೆನ್ನಾಗಿ ಕಾಣುತ್ತವೆ. ಕೈತೋಟ ಇಲ್ಲವೇ? ದಿನಸಿ ಅಂಗಡಿ ಅಥವಾ ಸ್ಥಳೀಯ ಮಾರುಕಟ್ಟೆಯಿಂದ ಅಗ್ಗದ ಹೂವುಗಳು ನಿಮ್ಮ ಗೆಸ್ಟ್‌ಗಳನ್ನು ಸ್ವಾಗತಿಸಲು ಆಕರ್ಷಕ ವಿಧಾನವಾಗಬಹುದು.
9. ದೊಡ್ಡ ಪ್ರಮಾಣದಲ್ಲಿ ಖರೀದಿಸುವ ಮೂಲಕ ಹಣವನ್ನು ಉಳಿಸಿ
ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಇರಿಸುವುದು ನಿಮ್ಮ ಸಮಯ ಮತ್ತು ಹಣವನ್ನು ಉಳಿಸಬಹುದಾದರೂ ನೀವು ಈಗಲೂ ನಿಮ್ಮ ವಿಶೇಷ ಸ್ಪರ್ಶವನ್ನು ಸೇರಿಸಬಹುದು. ದಕ್ಷಿಣ ಆಫ್ರಿಕಾದ ಪೋರ್ಟ್ ಎಲಿಜಬೆತ್‌ನ ಹೋಸ್ಟ್ ಕರೇನ್ ತಮಗೆ ಅಗತ್ಯವಿರುವ ಕುಕೀಸ್ ಅನ್ನು ಹೋಲ್‌ಸೇಲ್ ದರದಲ್ಲಿ ಖರೀದಿಸುತ್ತಾರೆ, "ಇದು ನಮಗೆ ಅತ್ಯಂತ ಕಡಿಮೆ ದರದಲ್ಲಿ ಬಿಸ್ಕಿಟ್‌ಗಳನ್ನು ಒದಗಿಸುತ್ತದೆ," ಎಂದು ಅವರು ಹೇಳುತ್ತಾರೆ. ಟ್ರೀಟ್‌ಗಳನ್ನು ವೈಯಕ್ತೀಕರಿಸಲು ಅವರು ತ್ವರಿತ ಮಾರ್ಗವನ್ನು ಸಹ ಕಂಡುಕೊಂಡರು: "ನಾವು ಸೀಲರ್ ಅನ್ನು ಖರೀದಿಸಿದ್ದೇವೆ ಮತ್ತು ನಾವು ನಮ್ಮ ಸ್ವಂತ ಲೇಬಲ್‌ನೊಂದಿಗೆ ಬಿಸ್ಕಿಟ್‌ಗಳನ್ನು ಪ್ಯಾಕ್ ಮಾಡಿ ಸೀಲ್ ಮಾಡುತ್ತೇವೆ."
10. ವಿಶೇಷ ಸಂದರ್ಭಗಳನ್ನು ಸಂಭ್ರಮಿಸಿ
ಗೆಸ್ಟ್‌ಗಳು ಜನ್ಮದಿನ, ವಾರ್ಷಿಕೋತ್ಸವ ಅಥವಾ ರಜಾದಿನ ಎಂದು ಯಾವುದೇ ಉದ್ದೇಶಕ್ಕೆ ಭೇಟಿ ನೀಡುತ್ತಿರಲಿ, ಅವರ ವಾಸ್ತವ್ಯವನ್ನು ಇನ್ನಷ್ಟು ಸ್ಮರಣೀಯಗೊಳಿಸಲು ನೀವು ಸಹಾಯ ಮಾಡಬಹುದು. "ಹೊಸ ವರ್ಷಾಚರಣೆಗೆಂದು ಒಂದು ದಂಪತಿ ಉಳಿದುಕೊಂಡಿದ್ದರು, ನಾವು ಅವರಿಗೆ ಒಂದು ಬಾಟಲ್ ಷಾಂಪೇನ್ ತಂದುಕೊಟ್ಟೆವು" ಎನ್ನುತ್ತಾರೆ, ಅಟ್ಲಾಂಟಾದ ಹೋಸ್ಟ್ ಡಾಮನ್. ಕೆನಡಾದ ಒಂಟಾರಿಯೊದಲ್ಲಿನ ಹೋಸ್ಟ್ ಜೆನ್ನಿಫರ್ ಕೂಡ ಸಂದರ್ಭಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತಾರೆ. "ಗೆಸ್ಟ್ ನಿರ್ದಿಷ್ಟ ಆಚರಣೆಗೆಂದು—ಜನ್ಮದಿನ, ಮಧುಚಂದ್ರ—ಇಲ್ಲಿಗೆ ಬಂದಿದ್ದರೆ, ನಾನು ಅವರ ಆಚರಣೆಗೆ ಪೂರಕವಾಗುವಂತೆ ಅಲ್ಲಿ ಸಣ್ಣದೇನನ್ನಾದರೂ ಇರಿಸಿರುತ್ತೇನೆ," ಎಂದು ಆಕೆ ಹೇಳುತ್ತಾರೆ.
ನಿಮ್ಮ ಗೆಸ್ಟ್‌ಗಳನ್ನು ಅವರ ನಿರೀಕ್ಷೆಗಳನ್ನು ಮೀರಿ ಸ್ವಾಗತಿಸುವುದನ್ನು ಯಾವಾಗಲೂ ಪ್ರಶಂಸಿಸಲಾಗುತ್ತದೆ ಆದರೆ ನೆನಪಿಡಿ: ಆತಿಥ್ಯಕ್ಕೆ ಏನನ್ನೂ ವೆಚ್ಚ ಮಾಡಬೇಕಾಗಿಲ್ಲ. ಕೈಬರಹದ ಟಿಪ್ಪಣಿಯ ಮೂಲಕವೇ ನೀವು ಅವರ ಬಗ್ಗೆ ಯೋಚಿಸುತ್ತಿದ್ದೀರಿ ಎಂದು ನಿಮ್ಮ ಗೆಸ್ಟ್‌ಗಳಿಗೆ ತೋರಿಸಬಹುದು, ಅವರು ಮನೆಯಿಂದ ದೂರವಿರುವುದರಿಂದ ಅವರಿಗೆ ಇದು ದೊಡ್ಡ ವ್ಯತ್ಯಾಸ ಮಾಡಬಹುದು.
ವಿಶೇಷ ಆಕರ್ಷಣೆಗಳು
ಮೆಚ್ಚುಗೆಯ ಒಂದು ಸಣ್ಣ ದ್ಯೋತಕವು ಗೆಸ್ಟ್‌ಗಳಿಗೆ ವಿಶೇಷವಾದ ಅನುಭವವನ್ನು ನೀಡುವಲ್ಲಿ ಬಹಳ ಸಹಾಯ ಮಾಡುತ್ತದೆ
ವೈಯಕ್ತಿಕ ಸ್ಪರ್ಶಕ್ಕಾಗಿ ಕೈಬರಹದ ಟಿಪ್ಪಣಿಯನ್ನು ಇರಿಸಲು ಪ್ರಯತ್ನಿಸಿ
ನೀವು ಹೂವುಗಳು, ಪಾನೀಯಗಳು, ಕುರುಕಲು ತಿನಿಸುಗಳು ಮತ್ತು ಇತರ ತಿನಿಸುಗಳನ್ನು ಇರಿಸುವ ಮೂಲಕ ಇನ್ನೂ ಹೆಚ್ಚಿನದನ್ನು ಮಾಡಬಹುದು
ಸ್ಥಳೀಯ ಉತ್ಪನ್ನಗಳು ನಿಮ್ಮ ಸಮುದಾಯವನ್ನು ಬೆಂಬಲಿಸಬಹುದು—ಮತ್ತು ಗೆಸ್ಟ್‌ಗಳು ಆತ್ಮೀಯ ಭಾವನೆಯನ್ನು ಹೊಂದಲು ಸಹಾಯ ಮಾಡಬಹುದು