ನಿಮ್ಮ ಅನುಭವದ ಲಿಸ್ಟಿಂಗ್ ಅನ್ನು ಬುಕ್ ಮಾಡಲು ಸಿದ್ಧಗೊಳಿಸುವುದು

ನಿಮ್ಮ ಕ್ಯಾಲೆಂಡರ್ ತೆರೆಯಿರಿ ಮತ್ತು ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿಸಿ.
Airbnb ಅವರಿಂದ ಫೆಬ್ರ 6, 2025ರಂದು
2 ನಿಮಿಷ ಓದಲು
ಫೆಬ್ರ 6, 2025 ನವೀಕರಿಸಲಾಗಿದೆ

ನಿಮ್ಮ Airbnb ಅನುಭವಕ್ಕೆ ಅನುಮೋದನೆ ದೊರಕಿದ್ದಕ್ಕಾಗಿ ಅಭಿನಂದನೆಗಳು! ನಿಮ್ಮ ಲಿಸ್ಟಿಂಗ್ ಅನ್ನು ನೀವು ಪ್ರಕಟಿಸಿದ ನಂತರ, ನಿಮ್ಮ ಮೊದಲ ಗೆಸ್ಟ್‌ಗಳನ್ನು ಆಕರ್ಷಿಸಲು ನೀವು ಮಾಡಬಹುದಾದ ಎರಡು ವಿಷಯಗಳು ಇಲ್ಲಿವೆ.

ನಿಮ್ಮ ಕ್ಯಾಲೆಂಡರ್ ತೆರೆದಿರಿಸಿ

ನಿಮ್ಮ ಕ್ಯಾಲೆಂಡರ್ ಅನ್ನು ನೀವು ಹೊಂದಿಸಬೇಕಾಗುತ್ತದೆ, ಆಗ ಗೆಸ್ಟ್‌ಗಳು ಅನುಭವವನ್ನು ಬುಕ್ ಮಾಡಬಹುದು. ಚಟುವಟಿಕೆಯ ಅವಧಿ, ನಿಮ್ಮ ಲಭ್ಯತೆ ಮತ್ತು ನಿಮ್ಮ ವ್ಯವಹಾರ ಗುರಿಗಳ ಆಧಾರದ ಮೇಲೆ ನೀವು ಎಷ್ಟು ಬಾರಿ ಚಟುವಟಿಕೆಯನ್ನು ನೀಡುತ್ತೀರಿ ಎಂಬುದನ್ನು ನಿರ್ಧರಿಸಿ.

ಪ್ರಾರಂಭಿಸಲು, ನೀವು ಹೋಸ್ಟ್ ಮಾಡಲು ಬಯಸುವ ದಿನವನ್ನು ಆಯ್ಕೆಮಾಡಿ ಮತ್ತು ಅನುಭವವನ್ನು ನಿಗದಿಪಡಿಸಿ ಎಂಬುದನ್ನು ಟ್ಯಾಪ್ ಮಾಡಿ. ಸಮಯ, ಬುಕಿಂಗ್ ಪ್ರಕಾರ, ಬೆಲೆ, ಗುಂಪಿನ ಗಾತ್ರ ಮತ್ತು ಇತರ ವಿವರಗಳನ್ನು ಆರಿಸಿ. ವಾರಕ್ಕೆ ಕನಿಷ್ಠ ಒಂದು ವಾರಾಂತ್ಯದ ದಿನವನ್ನು ಒಳಗೊಂಡಂತೆ ತಿಂಗಳಿಗೆ 10 ಅಥವಾ ಅದಕ್ಕಿಂತ ಹೆಚ್ಚು ಬಾರಿ ಚಟುವಟಿಕೆಯನ್ನು ನೀಡುವುದರಿಂದ, ತಮ್ಮ ಅಗತ್ಯಗಳಿಗೆ ಸೂಕ್ತವಾದ ದಿನಾಂಕ ಮತ್ತು ಸಮಯವನ್ನು ಕಂಡುಕೊಳ್ಳಲು ಗೆಸ್ಟ್‌ಗಳಿಗೆ ಸಹಾಯವಾಗುತ್ತದೆ.

ಅನೇಕ ಹೋಸ್ಟ್‌ಗಳು ಬುಕಿಂಗ್ ಪಡೆಯುವ ಅವಕಾಶಗಳನ್ನು ಹೆಚ್ಚಿಸಲು ಎರಡು ತಿಂಗಳವರೆಗಿನ ಲಭ್ಯತೆಯನ್ನು ಸೇರಿಸುತ್ತಾರೆ. ನೀವು ಪ್ರತಿ ದಿನ ನೀಡುವ ಅನುಭವವನ್ನು 60 ದಿನಗಳವರೆಗೆ ಮುಂಚಿತವಾಗಿ ಮತ್ತು ನೀವು ವಾರಕ್ಕೊಮ್ಮೆ ನೀಡುವ ಅನುಭವವನ್ನು 52 ವಾರಗಳವರೆಗೆ ಮುಂಚಿತವಾಗಿ ನಿಗದಿಪಡಿಸಬಹುದು.

ರದ್ದತಿಗಳನ್ನು ತಪ್ಪಿಸಲು ನೀವು ಹೋಸ್ಟ್ ಮಾಡಲು ಸಾಧ್ಯವಾಗದ ಯಾವುದೇ ದಿನಾಂಕಗಳನ್ನು ನಿರ್ಬಂಧಿಸಲು ಮರೆಯದಿರಿ. ತಯಾರಿಯ ಕೆಲಸ ಅಥವಾ ಶುಚಿಗೊಳಿಸುವಿಕೆಗಾಗಿ ನೀವು ಚಟುವಟಿಕೆಯ ಪ್ರಾರಂಭಕ್ಕಿಂತ ಮೊದಲು ಹಾಗೂ ಮುಕ್ತಾಯದ ನಂತರ ಸಮಯ ನಿರ್ಬಂಧಿಸಬಹುದು.

ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿಸಿ

Airbnb ಅನುಭವಗಳನ್ನು ಬುಕ್‌ ಮಾಡುವಾಗ ಅನೇಕ ಗೆಸ್ಟ್‌ಗಳು ಬೆಲೆಯನ್ನು ಪರಿಗಣಿಸುತ್ತಾರೆ. ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿಸುವುದು ನಿಮ್ಮ ಲಿಸ್ಟಿಂಗ್ ಎದ್ದು ಕಾಣಲು ಸಹಾಯ ಮಾಡುತ್ತದೆ.

ನಿಮ್ಮ ಖರ್ಚುಗಳನ್ನು ಭರಿಸಲು ನಿಮಗೆ ಎಷ್ಟು ಬೇಕಾಗುತ್ತದೆ ಎಂಬುದನ್ನು ಕಂಡುಕೊಳ್ಳುವ ಮೂಲಕ ಪ್ರಾರಂಭಿಸಿ. ಮುಂದೆ, ತಲಾ ವ್ಯಕ್ತಿಗೆ ಕಡಿಮೆ ದರವನ್ನು ನಿಗದಿಪಡಿಸುವುದು ಹೆಚ್ಚು ಗೆಸ್ಟ್‌ಗಳನ್ನು ಆಕರ್ಷಿಸುತ್ತದೆ ಮತ್ತು ಹೆಚ್ಚಿನ ಆದಾಯಕ್ಕೆ ಕಾರಣವಾಗಬಹುದು ಎಂದು ನೀವು ಕಂಡುಕೊಳ್ಳಬಹುದು. ಉದಾಹರಣೆಗೆ:

  • 4 ಗೆಸ್ಟ್‌ಗಳು ತಲಾ $75 USD ದರದಲ್ಲಿ ಬುಕ್‌ ಮಾಡುತ್ತಾರೆ = $300 USD
  • 8 ಗೆಸ್ಟ್‌ಗಳು ತಲಾ $60 USD ದರದಲ್ಲಿ ಬುಕ್‌ ಮಾಡುತ್ತಾರೆ = $480 USD

ನಿಮ್ಮ ಮೊದಲ ಗೆಸ್ಟ್‌ಗಳು ಮತ್ತು ಆರಂಭಿಕ ವಿಮರ್ಶೆಗಳನ್ನು ಆಕರ್ಷಿಸಲು ಸಹಾಯ ಮಾಡಲು ನೀವು ಹೊಸ ಅನುಭವದ ಪ್ರಮೋಷನ್ ಅನ್ನು ಸಹ ರಚಿಸಬಹುದು. 30 ದಿನಗಳವರೆಗೆ ನಿಮ್ಮ ಬೆಲೆಗೆ 5% ರಿಂದ 50% ರಿಯಾಯಿತಿಯನ್ನು ನೀಡಲು ಪ್ರಮೋಷನ್ ಒಂದು ಅವಕಾಶವಾಗಿದೆ.

ನೀವು ಕನಿಷ್ಟ 20% ರಿಯಾಯಿತಿಯನ್ನು ಆರಿಸಿದರೆ, ನಿಮ್ಮ ರಿಯಾಯಿತಿ ದರವನ್ನು ಕ್ರಾಸ್ ಔಟ್ ಮಾಡಲಾದ ನಿಮ್ಮ ಮೂಲ ದರದ ಪಕ್ಕದಲ್ಲಿ Airbnb ಹುಡುಕಾಟ ಫಲಿತಾಂಶಗಳಲ್ಲಿ ಪ್ರದರ್ಶಿಸಲಾಗುತ್ತದೆ. ಕೊಡುಗೆ ಕೊನೆಗೊಂಡಾಗ ಅನುಭವವು ನಿಮ್ಮ ಮೂಲ ಬೆಲೆಗೆ ಹಿಂತಿರುಗುತ್ತದೆ.

ಪ್ರಮೋಷನ್ ಅನ್ನು‌ ರಚಿಸಲು:

  1. ನಿಮ್ಮ ಲಿಸ್ಟಿಂಗ್‌ಗೆ ಹೋಗಿ ಮತ್ತು ಎಡಿಟ್ ಮಾಡಿ ಒತ್ತಿ
  2. ದರ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ರಿಯಾಯಿತಿಗಳು ಎಂಬುದನ್ನು ಒತ್ತಿ
  3. ವಿಶೇಷ ಕೊಡುಗೆಗಳ ಅಡಿಯಲ್ಲಿ, ಹೊಸ ಅನುಭವದ ಪ್ರಮೋಷನ್‌ ಎಂಬಲ್ಲಿಗೆ ಹೋಗಿ ಮತ್ತು ಕೊಡುಗೆ ರಚಿಸಿ ಒತ್ತಿ

ನಿಮ್ಮ ದರ ನಿಗದಿ ಮತ್ತು ಇತರ ಸೆಟ್ಟಿಂಗ್‌ಗಳ ಮೇಲೆ ನೀವು ಯಾವಾಗಲೂ ನಿಯಂತ್ರಣ ಹೊಂದಿರುತ್ತೀರಿ. ನಿಮ್ಮ ಫಲಿತಾಂಶಗಳು ಭಿನ್ನವಾಗಬಹುದು.

ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.

Airbnb
ಫೆಬ್ರ 6, 2025
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ