ಗೆಸ್ಟ್‌ಗಳೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸುವುದು
ತ್ವರಿತವಾಗಿ ಪ್ರತಿಕ್ರಿಯಿಸಿ ಮತ್ತು ಯಶಸ್ಸಿಗಾಗಿ Airbnb ಯ ಟೂಲ್‌ಗಳನ್ನು ಬಳಸಿ.
Airbnb ಅವರಿಂದ ಫೆಬ್ರ 17, 2023ರಂದು
ಫೆಬ್ರ 17, 2023 ನವೀಕರಿಸಲಾಗಿದೆ1 ನಿಮಿಷ ಓದಲು
ಗೆಸ್ಟ್‌ಗಳು ಚೆಕ್ ಇನ್ ಮಾಡುವ ಮೊದಲು ನಿಮ್ಮ ಸ್ಥಳವನ್ನು ಪ್ರವೇಶಿಸುವ ಮಾರ್ಗನಿರ್ದೇಶನಗಳು ಮತ್ತು ಸೂಚನೆಗಳಂತಹ ಪ್ರಮುಖ ಮಾಹಿತಿಯನ್ನು ಹೊಂದಿರುವುದು ಬಹಳ ಮುಖ್ಯ. ಹೋಸ್ಟ್‌ಗಳು ಪಾಲಿಸಬೇಕಾದ ನಿಯಮಗಳ ಭಾಗವಾಗಿ, ನೀವು ಯಾವಾಗಲೂ ಗೆಸ್ಟ್‌ಗಳ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿರಬೇಕು ಹಾಗೂ ಅವರ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಬೇಕು.
ಸಂವಹನ ಯೋಜನೆಯನ್ನು ರೂಪಿಸುವುದು
ನಿಮ್ಮ ಗೆಸ್ಟ್‌ಗಳು ವಾಸ್ತವ್ಯ ಹೂಡಿದ ನಂತರ, ಅವರು ಪ್ರಶ್ನೆಗಳಿಗೆ ಉತ್ತರಿಸಲು ಲಭ್ಯವಿರಿ. ಪ್ರತಿಕ್ರಿಯಾತ್ಮಿಕವಾಗಿರಲು ಈ ಸಲಹೆಗಳನ್ನು ಪ್ರಯತ್ನಿಸಿ:
- ನಿಮ್ಮ ಫೋನ್‌ಗೆ Airbnb ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಅಧಿಸೂಚನೆಗಳನ್ನುಆನ್ ಮಾಡಿ. ನೀವು ಪಠ್ಯ, ಇಮೇಲ್ ಅಥವಾ ನೇರವಾಗಿ ಆ್ಯಪ್‌ನಲ್ಲಿ ಅಧಿಸೂಚನೆಗಳನ್ನು ಸ್ವೀಕರಿಸಬಹುದು.
- ತ್ವರಿತ ಪ್ರತಿಕ್ರಿಯೆಗಳನ್ನುಬಳಸಿ. ಕೆಲವು ಸೆಕೆಂಡ್‌ಗಳಲ್ಲೇ ಉತ್ತರ ಕಳುಹಿಸಲು ಸಂದೇಶಗಳನ್ನು ಡ್ರಾಫ್ಟ್ ಮಾಡಿ ಮತ್ತು ಸೇವ್ ಮಾಡಿ—ಇದರಿಂದ ಗೆಸ್ಟ್‌ಗಳು ಸಾಮಾನ್ಯವಾಗಿ ಕೇಳುವ ಪ್ರಶ್ನೆಗೆ, ನೀವು ತ್ವರಿತವಾಗಿ ಉತ್ತರಿಸಬಹುದು.
- ಶೆಡ್ಯೂಲ್ ಮಾಡಿರುವ ಮೆಸೇಜ್‌ಗಳನ್ನುಬಳಸಿ ನೋಡಿ. ಈ ಟೂಲ್ ಸಹಾಯದಿಂದ, ಗೆಸ್ಟ್‌ಗಳು ಪ್ರಮುಖ ಕ್ಷಣಗಳಲ್ಲಿ ಸ್ವಯಂಚಾಲಿತ ಸಂದೇಶಗಳನ್ನು ಸ್ವೀಕರಿಸಬಹುದು, ಉದಾಹರಣೆಗೆ ಬುಕಿಂಗ್ ನಂತರ ಅಥವಾ ಚೆಕ್-ಇನ್ ಮಾಡುವ ಮೊದಲು.
- ನಿಮ್ಮ ಫೋನ್ ಅಥವಾ ಇಮೇಲ್‌ಗೆ ಪ್ರತಿಕ್ರಿಯಿಸಲು ನಿಮಗೆ ಸಾಧ್ಯವಾಗದಿದ್ದರೆ ಗೆಸ್ಟ್‌ಗಳಿಗೆ ಪ್ರತಿಕ್ರಿಯಿಸುವುದಕ್ಕೆ ಸಹಾಯ ಮಾಡಲು ಸಹ-ಹೋಸ್ಟ್ ಅನ್ನು ಸೇರಿಸಿಕೊಳ್ಳಿ.
ಗೆಸ್ಟ್‌ಗಳೊಂದಿಗೆ ಮೆಸೇಜ್ ಮಾಡುವುದು
ಗೆಸ್ಟ್ ನಿಮ್ಮ ಸ್ಥಳವನ್ನು ಬುಕ್ ಮಾಡಿದಾಗ, ಹೃದಯಪೂರ್ವಕ ಹಾಗೂ ಸ್ವಾಗತಾರ್ಹ ಸಂದೇಶವನ್ನು ಕಳುಹಿಸಿ. ಸಹಾನುಭೂತಿ ತೋರಿಸುವುದು—ಮತ್ತು ಊಹೆಗಳನ್ನು ಮಾಡದಿರುವುದು—ಬಹಳ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ.
ಈ ಕೆಳಗಿನ ಪ್ರಮುಖ ಸಂದರ್ಭಗಳಲ್ಲಿ ಸಂಪರ್ಕದಲ್ಲಿರಲು ಮರೆಯದಿರಿ:
- ಆಗಮನದ ಮೊದಲು: ಗೆಸ್ಟ್‌ಗಳ ನಿರೀಕ್ಷಿತ ಆಗಮನಕ್ಕಿಂತ ಕನಿಷ್ಠ 24 ಗಂಟೆಗಳ ಮೊದಲು ಸ್ಪಷ್ಟ ಮಾರ್ಗನಿರ್ದೇಶನಗಳನ್ನು ಮತ್ತು ಚೆಕ್-ಇನ್ ಸೂಚನೆಗಳನ್ನು ಒದಗಿಸಿ.
- ಚೆಕ್-ಇನ್: ನಿಮ್ಮ ಗೆಸ್ಟ್‌ಗಳು ಒಳಗೆ ಬರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಲಭ್ಯವಿರಿ.
- ಮೊದಲ ರಾತ್ರಿಯ ವಾಸ್ತವ್ಯದ ನಂತರ: ನಿಮ್ಮ ಗೆಸ್ಟ್‌ಗಳ ಮೊದಲ ರಾತ್ರಿಯ ವಾಸ್ತವ್ಯ ಹೇಗಿತ್ತು ಹಾಗೂ ಅವರಿಗೆ ಏನಾದರೂ ಅಗತ್ಯವಿದೆಯೇ ಎಂದು ಕೇಳಲು ತ್ವರಿತ ಟಿಪ್ಪಣಿಯನ್ನು ಕಳುಹಿಸುವ ಮೂಲಕ ಅವರೊಂದಿಗೆ ಮುಕ್ತವಾಗಿ ಸಂವಹನ ಮಾಡಿ.
- ಚೆಕ್‌ಔಟ್ ಮಾಡುವ ಮೊದಲು: ಚೆಕ್-ಔಟ್ ಸಮಯ ಮತ್ತು ಯಾವುದೇ ಚೆಕ್-ಔಟ್ ಅಗತ್ಯಗಳ ಕುರಿತು ಗೆಸ್ಟ್‌ಗಳಿಗೆ ನೆನಪಿಸಿ, ಉದಾಹರಣೆಗೆ ಲೈಟ್‌ಗಳನ್ನು ಆಫ್ ಮಾಡುವುದು ಅಥವಾ ಹೀಟರ್‌ಗಳನ್ನು ಆಫ್ ಮಾಡುವುದು.
- ನಿರ್ಗಮನದ ನಂತರ: ಧನ್ಯವಾದ ಹೇಳಲು ತ್ವರಿತ ಟಿಪ್ಪಣಿಯನ್ನು ಕಳುಹಿಸಿ, ಇದು ವಿಮರ್ಶೆಯನ್ನು ಬರೆಯಲು ಗೆಸ್ಟ್‌ಗಳಿಗೆ ನೆನಪು ಮಾಡುತ್ತದೆ.
Airbnb
ಫೆಬ್ರ 17, 2023
ಇದು ಸಹಾಯಕವಾಗಿದೆಯೇ?