ನಿಮ್ಮ ಮೊದಲ ರಿಸರ್ವೇಶನ್‌ಗೆ ಯಾರನ್ನು ಸ್ವಾಗತಿಸಬೇಕು ಎಂಬುದನ್ನು ಆಯ್ಕೆ ಮಾಡುವುದು

Airbnbಯಲ್ಲಿ ಅನುಭವಿ ಗೆಸ್ಟ್ ಅಥವಾ ಯಾರೊಂದಿಗಾದರೂ ಹೋಸ್ಟ್ ಮಾಡಲು ಪ್ರಾರಂಭಿಸಿ.
Airbnb ಅವರಿಂದ ನವೆಂ 16, 2022ರಂದು
ನವೆಂ 16, 2022 ನವೀಕರಿಸಲಾಗಿದೆ

ಅಪರಿಚಿತರನ್ನು ನಿಮ್ಮ ಮನೆಗೆ ಸ್ವಾಗತಿಸುವುದು ಮೊದಲ ಬಾರಿಗೆ ಸ್ವಲ್ಪ ವಿಚಿತ್ರವೆನಿಸಬಹುದು. ನಿಮಗೆ ಮನಃಶಾಂತಿಯನ್ನು ನೀಡಲು ಸಹಾಯ ಮಾಡಲು, ನಿಮಗೆ ಮತ್ತು ನಿಮ್ಮ ಪ್ರಾಪರ್ಟಿಗೆ ಅಪಾಯಗಳನ್ನು ಕಡಿಮೆ ಮಾಡಲು ನಮ್ಮ ಬಳಿ ಕೆಲವು ತಂತ್ರಗಳಿವೆ.

ಒಬ್ಬ ಹೊಸ ಹೋಸ್ಟ್ ಆಗಿ, ನಿಮ್ಮ ಸ್ಥಳದಲ್ಲಿ ಮೊದಲು ವಾಸ್ತವ್ಯ ಹೂಡಬಹುದಾದ ಗೆಸ್ಟ್‌ನ ಪ್ರಕಾರವನ್ನು ಕೂಡ ನೀವು ಆರಿಸಿಕೊಳ್ಳಬಹುದು. ಈ ಹಂತದಲ್ಲಿ, ನೀವು ಇವರನ್ನು ಸ್ವಾಗತಿಸಲು ಬಯಸುತ್ತೀರಾ ಎಂಬುದನ್ನು ಆಯ್ಕೆ ಮಾಡಿ:

"ಯಾವುದೇ Airbnb ಗೆಸ್ಟ್" ಎಂದರೆ ಹೊಸಬರೂ ಸೇರಿದಂತೆ ನಮ್ಮ ಸಮುದಾಯದ ಸದಸ್ಯರಾಗಿರುವ ಯಾರಾದರೂ ಎಂದರ್ಥವಾಗಿರುತ್ತದೆ. ಈ ಆಯ್ಕೆಯನ್ನು ಆರಿಸುವುದು ನಿಮ್ಮ ಮೊದಲ ರಿಸರ್ವೇಶನ್ ಅನ್ನು ಬೇಗ ಪಡೆಯಲು ಕಾರಣವಾಗಬಹುದು, ಏಕೆಂದರೆ ಇದು ವಾಸ್ತವ್ಯ ಹೂಡಲು ಸ್ಥಳಗಳನ್ನು ಹುಡುಕುತ್ತಿರುವ ಹೆಚ್ಚು ಸಂಭಾವ್ಯ ಗೆಸ್ಟ್‌ಗಳಿಗೆ ಬಾಗಿಲು ತೆರೆಯುತ್ತದೆ.

ಅನುಭವಿ ಗೆಸ್ಟ್ ಎಂದರೆ Airbnb ನಲ್ಲಿ ಕನಿಷ್ಠ ಮೂರು ಉತ್ತಮ ವಾಸ್ತವ್ಯಗಳನ್ನು ಹೂಡಿದ ಯಾವುದೇ ಕೆಟ್ಟ ವಿಮರ್ಶೆಗಳನ್ನು ಹೊಂದಿರದ ವ್ಯಕ್ತಿ. ಎಲ್ಲಾ ಅನುಭವಿ ಗೆಸ್ಟ್‌ಗಳು ತಮ್ಮ ಗುರುತನ್ನು ಪರಿಶೀಲಿಸಿಕೊಂಡಿರುತ್ತಾರೆ ಮತ್ತು ಫೈಲ್‍‍ನಲ್ಲಿ ಪಾವತಿಯ ವಿಧಾನವನ್ನು ಹೊಂದಿರುತ್ತಾರೆ. ಅವರ ಹಿಂದಿನ ದಾಖಲೆಯನ್ನು ಗಮನಿಸಿದರೆ, ಅವರು ಮೊದಲ ಬಾರಿಗೆ ಹೋಸ್ಟಿಂಗ್ ಮಾಡುವುದನ್ನು ಕಡಿಮೆ ಸವಾಲಿದ್ದೆನಿಸುವಂತೆ ಮಾಡಲು ಸಹಾಯ ಮಾಡಬಹುದು ಮತ್ತು ನಿಮ್ಮೊಂದಿಗೆ ಅವರ ವಾಸ್ತವ್ಯದ ಬಗ್ಗೆ ಕೆಲವು ಸಹಾಯಕವಾದ ಪ್ರತಿಕ್ರಿಯೆಯನ್ನು ನೀಡಬಹುದು.

ಎರಡೂ ಆಯ್ಕೆಗಳು ಉತ್ತಮ ಆಯ್ಕೆಗಳಾಗಿವೆ. ನಿಮಗೆ ಸೂಕ್ತವೆನಿಸುವದನ್ನು ಆರಿಸಿ.

ಈ ಲೇಖನ ಒಳಗೊಂಡಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.
Airbnb
ನವೆಂ 16, 2022
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ