ಸುಸ್ಥಿರ ಹೋಸ್ಟಿಂಗ್‌ಗೆ ಪ್ರಾಥಮಿಕ ಮಾರ್ಗದರ್ಶಿ
ವಿಶೇಷ ಆಕರ್ಷಣೆಗಳು
ಇಂಧನ-ಸಮರ್ಥ ವಸ್ತುಗಳಲ್ಲಿ ಹೂಡಿಕೆ ಮಾಡುವುದರಿಂದ ಅಂತಿಮವಾಗಿ ನಿಮ್ಮ ಹಣವನ್ನು ಉಳಿಸಬಹುದು
ತೊಳೆಯಬಹುದಾದ ಶುಚಿಗೊಳಿಸುವಿಕೆ ಬಟ್ಟೆಗಳಂತಹ ಸುಸ್ಥಿರ ಗೃಹಬಳಕೆಯ ಅವಶ್ಯಕ ವಸ್ತುಗಳಿಗೆ ಬದಲಾಯಿಸುವುದರಿಂದ ನಿಮ್ಮ ಪರಿಸರದ ಹೆಜ್ಜೆಗುರುತನ್ನು ಕಡಿಮೆ ಮಾಡಬಹುದು
ಕಡಿಮೆ ಹರಿವಿನ ಫಿಕ್ಸ್ಚರ್‌ಗಳನ್ನು ಅಳವಡಿಸುವುದು ನೀರನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ
ಪರಿಸರಕ್ಕೆ ಜವಾಬ್ದಾರಿಯುತ ಹೋಸ್ಟ್ ಆಗಿರುವುದು ಜಗತ್ತಿಗೆ ಒಳ್ಳೆಯದು ಮಾತ್ರವಲ್ಲ, ಇದು ನಿಮ್ಮ ಹೋಸ್ಟಿಂಗ್ ವ್ಯವಹಾರಕ್ಕೂ ಒಳ್ಳೆಯದು. 2019 ರಲ್ಲಿ, ಪರಿಸರ ಸ್ನೇಹಿ ಮನೆಗಳಲ್ಲಿ ವಾಸ್ತವ್ಯಗಳ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ 141% * ಹೆಚ್ಚಾಗಿದೆ.
ಹೆಚ್ಚು ಸುಸ್ಥಿರ ಹೋಸ್ಟ್ ಆಗಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಾವು, ವಿಶ್ವಸಂಸ್ಥೆಯ ಪ್ರಮುಖ ಜಾಗತಿಕ ಪರಿಸರ ಪ್ರಾಧಿಕಾರವಾದ United Nations Environment Programmeಜೊತೆ , ಮತ್ತು ತಜ್ಞರ ಒಳನೋಟಗಳಿಗಾಗಿ ವಿಶ್ವದ ಪ್ರಮುಖ ಪರಿಸರ ಸಂರಕ್ಷಣಾ ಸಂಸ್ಥೆಯಾದ World Wildlife Fund ಜೊತೆ, ನಾವು ನಿಕಟವಾಗಿ ಕೆಲಸ ಮಾಡಿದ್ದೇವೆ. ಪ್ರಪಂಚದಾದ್ಯಂತ ಬದಲಾವಣೆಯನ್ನು ತರಲು, ಸರಳವಾದ ಆದರೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡ ಹೋಸ್ಟ್‌ಗಳಿಂದಲೂ ನಾವು ಸಲಹೆಗಳನ್ನು ಸಂಗ್ರಹಿಸಿದ್ದೇವೆ.
ನಿಮ್ಮ ಗೆಸ್ಟ್‌ಗಳಿಗೆ ಹೆಚ್ಚು ಸುಸ್ಥಿರ ವಾಸ್ತವ್ಯವನ್ನು ನೀವು ಹೇಗೆ ರೂಪಿಸಬಹುದು ಎಂಬುದನ್ನು ಕಂಡುಕೊಳ್ಳಲು ಮುಂದೆ ಓದಿ.
ಇಂಧನ-ಸಮರ್ಥ ಅಪ್‌ಗ್ರೇಡ್‌ಗಳನ್ನು ಅನುಷ್ಠಾನಗೊಳಿಸಿ
ನಿಮ್ಮ ಸ್ಥಳವನ್ನು ಹೆಚ್ಚು ಸಮರ್ಥ ಶಕ್ತಿಯ ಕೇಂದ್ರವಾಗಿಸುವುದರಿಂದ ನೀವು ಬಳಸುವ ಸಂಪನ್ಮೂಲಗಳ ಪ್ರಮಾಣವನ್ನು ಕಡಿಮೆ ಮಾಡಬಹುದು, ನಿಮ್ಮ ವೆಚ್ಚಗಳನ್ನು ಕಡಿಮೆ ಮಾಡಬಹುದು ಮತ್ತು ನಿಮ್ಮ ಇಂಗಾಲದ ಉತ್ಪಾದನೆಯನ್ನು ಕಡಿಮೆ ಮಾಡಬಹುದು. ಶಕ್ತಿಯ ಸಂರಕ್ಷಣೆಗಾಗಿ ಕೆಲವು ಸಲಹೆಗಳು ಇಲ್ಲಿವೆ:
- ಸಾಧನಗಳು ಬಳಕೆಯಲ್ಲಿಲ್ಲದಿದ್ದಾಗ ಅವುಗಳನ್ನು ಅನ್‌ಪ್ಲಗ್ ಮಾಡಲು ಗೆಸ್ಟ್‌ಗಳಿಗೆ ನೆನಪಿಸಿ: ಬಳಸದಿದ್ದಾಗಲೂ ಪ್ಲಗ್ ಇನ್ ಮಾಡಿಟ್ಟಿರುವ ಮೊಬೈಲ್ ಚಾರ್ಜರ್‌ಗಳಿಂದ ಮೊಬೈಲ್ ಫೋನ್‌ಗಳು ಬಳಸುವ 50%** ನಷ್ಟು ಶಕ್ತಿಯ ಪ್ರಮಾಣವು ಬರುತ್ತದೆ.
- ನಿಮ್ಮ ವಾಟರ್ ಹೀಟರ್ ಅನ್ನು ಹೊಂದಿಸಿ ತಾಪಮಾನವು 140 ಡಿಗ್ರಿ ಫ್ಯಾರನ್‌ಹೀಟ್ (60 ಡಿಗ್ರಿ ಸೆಲ್ಸಿಯಸ್) ಆಗಿದ್ದರೂ, ಅದನ್ನು 120-130 ಡಿಗ್ರಿ ಫ್ಯಾರನ್‌ಹೀಟ್ (48-54 ಡಿಗ್ರಿ ಸೆಲ್ಸಿಯಸ್)ಗೆ ಇಳಿಸುವುದು ಶಕ್ತಿಯನ್ನು ಉಳಿಸಲು ಸಹಾಯ ಮಾಡುತ್ತದೆ. ನಿಮ್ಮ ಲೈಟ್‌ಬಲ್ಬ್‌ಗಳನ್ನು
- ಪರಿಶೀಲಿಸಿ: ಸಾಧ್ಯವಾದಷ್ಟು ಕಡಿಮೆ ವ್ಯಾಟೇಜ್ ಬಳಸುವುದರಿಂದ ಕಡಿಮೆ ಶಾಖವನ್ನು ಉತ್ಪಾದಿಸಬಹುದು ಮತ್ತು ಕಾಲಾನಂತರದಲ್ಲಿ ಇದು ನಿಮ್ಮ ಶಕ್ತಿಯ ಬಳಕೆಯನ್ನು ಕಡಿಮೆ ಮಾಡುತ್ತದೆ. CFL ಮತ್ತು LED ಯಂತಹ ಹೆಚ್ಚು ಸಮರ್ಥ ಶಕ್ತಿಯ ಬಲ್ಬ್‌ಗಳು ಸಹ ಕಡಿಮೆ ಶಕ್ತಿಯನ್ನು ಬಳಸುತ್ತವೆ ಮತ್ತು ಪ್ರಕಾಶಮಾನ ಬೆಳಕಿನ ಆಯ್ಕೆಗಳಿಗಿಂತ** ಹೆಚ್ಚು ಕಾಲ ಬಾಳಿಕೆ ಬರುತ್ತವೆ.
- ನಿಮ್ಮ ಸ್ಥಳವನ್ನು ಹವಾಮಾನ ನಿರೋಧಕವನ್ನಾಗಿಸಿ: ಬಿಸಿ ಮಾಡುವುದರ ಮತ್ತು ತಂಪು ಮಾಡುವುದರ ವೆಚ್ಚಗಳನ್ನು ಉಳಿಸುವುದಕ್ಕೆ ಸಹಾಯ ಮಾಡಲು ಬಾಗಿಲುಗಳ ಮೇಲೆ ಹವಾಮಾನ ಸ್ಟ್ರಿಪ್ಪಿಂಗ್ ಅನ್ನು ಸ್ಥಾಪಿಸಿ ಮತ್ತು ಕಿಟಕಿಗಳನ್ನು ಇನ್ಸುಲೇಟ್ ಮಾಡಿ.
- ಸ್ವಯಂಚಾಲಿತ ನಿಯಂತ್ರಕಗಳೊಂದಿಗೆ ಸ್ಮಾರ್ಟ್ ಥರ್ಮೋಸ್ಟಾಟ್‌ಗಳನ್ನು ಖರೀದಿಸಿ: ಗೆಸ್ಟ್‌ಗಳ ಆಗಮನಗಳು ಮತ್ತು ನಿರ್ಗಮನಗಳ ಆಧಾರದ ಮೇಲೆ ತಾಪಮಾನವನ್ನು ನಿಯಂತ್ರಿಸಲು ವೈಫೈ-ಸಕ್ರಿಯ ಥರ್ಮೋಸ್ಟಾಟ್‌ಗಳು ನಿಮಗೆ ಅನುವು ಮಾಡಿಕೊಡುತ್ತವೆ.
- ನಿಮ್ಮ ಉಪಕರಣಗಳನ್ನು ಮೌಲ್ಯಮಾಪನ ಮಾಡಿ: ಹೊಸ ಉಪಕರಣಗಳನ್ನು ಖರೀದಿಸುವ ಸಮಯ ಬಂದಾಗ, ಹೆಚ್ಚಿನ ಇಂಧನ ದಕ್ಷತೆಯ ರೇಟಿಂಗ್‌ಗಳನ್ನು ಹೊಂದಿರುವ ಸಾಧನಗಳನ್ನು ಆರಿಸಿಕೊಳ್ಳಿ.
ಸುಸ್ಥಿರ ಗೃಹೋಪಯೋಗಿ ವಸ್ತುಗಳನ್ನು ಆಯ್ಕೆ ಮಾಡಿ.
ತಮ್ಮ ಪರಿಸರದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಮರುಬಳಕೆ ಮಾಡಬಹುದಾದ ಶುಚಿಗೊಳಿಸುವಿಕೆಯ ಪೂರೈಕೆಗಳು ಮತ್ತು ಮರುಭರ್ತಿ ಮಾಡಬಹುದಾದ ಉತ್ಪನ್ನಗಳು ಬಹುತೇಕ ಜನರಿಗೆ ಅದ್ಭುತ ಅವಕಾಶಗಳಾಗಿವೆ. ಇನ್ನಷ್ಟು ಪರಿಸರಸ್ನೇಹಿಯಾಗಿರಲು ಈ ಸಲಹೆಗಳನ್ನು ಪರಿಗಣಿಸಿ:
- ಏಕ-ಬಳಕೆಯ ಶುಚಿಗೊಳಿಸುವಿಕೆ ಪೂರೈಕೆಗಳನ್ನು ತೆಗೆದುಹಾಕಿ: ಸೂಪರ್‌ಹೋಸ್ಟ್ ವೇಲ್ಸ್‌ನ ಪೆಂಬಾರ್ಕ್‌ಶೈರ್‌ನ ಅನ್ನಾ ಅವರು, ಬಳಸಿ ಎಸೆಯುವ ಪೇಪರ್ ಟೆವಲ್‌ಗಳ ಬದಲು ಅಡುಗೆಮನೆಯಲ್ಲಿ ತೊಳೆಯಬಹುದಾದ ಮತ್ತು ಮರುಬಳಕೆಮಾಡಬಹುದಾದ ಸ್ಪಾಂಜ್‌ಗಳು ಮತ್ತು ಮೈಕ್ರೋಫೈಬರ್ ಶುಚಿಗೊಳಿಸುವಿಕೆಯ ಬಟ್ಟೆಗಳನ್ನು ಸ್ಟಾಕ್ ಮಾಡುತ್ತಾರೆ.
- ಮರುಸಂಸ್ಕರಣೆ ಮಾಡಿದ ಕಾಗದದ ಉತ್ಪನ್ನಗಳನ್ನು ಬಳಸಿ: ಮುಖದ ಟಿಶ್ಯೂಗಳು ಅಥವಾ ಟಾಯ್ಕೆಟ್ ಪೇಪರ್‌ಗಳಂತಹ, ನೀವು ಒದಗಿಸುವ ಯಾವುದೇ ಕಾಗದದ ಉತ್ಪನ್ನಗಳಿಗಾಗಿ, ಹೆಚ್ಚು ಪರಿಸರಸ್ನೇಹಿಯಾಗಲು 100% ಮರುಸಂಸ್ಕರಿಸಿದ ಕಾಗದವನ್ನು ಆಯ್ಕೆ ಮಾಡಿ.
- ಕಠಿಣ ರಾಸಾಯನಿಕಗಳನ್ನು ಕಡಿಮೆ ಮಾಡಿ: ವಿಷಕಾರಿಯಲ್ಲದ ಅಥವಾ ಕಡಿಮೆ ವಿಷಕಾರಿಯಾಗಿರುವ, ನೈಸರ್ಗಿಕ ಅಥವಾ ಬಯೋಡಿಗ್ರೇಡೆಬಲ್ ಆಗಿರುವ ಪಾತ್ರೆ ತೊಳೆಯುವ ಸಾಬೂನು, ಲಾಂಡ್ರಿ ಡಿಟರ್ಜಂಟ್ ಮತ್ತು ಶೌಚ ಪರಿಕರಗಳನ್ನು ಖರೀದಿಸಿ. ಫ್ರಾನ್ಸ್‌ನ ಬಾರ್ಡೆಕ್ಸ್‌ನಲ್ಲಿ, ಸೂಪರ್‌ಹೋಸ್ಟ್ ಪಾಸ್ಕೆಲ್ ಅವರು ಸ್ಥಳೀಯ ಮಳಿಗೆಗಳಿಂದ ಸಾವಯವ ಸ್ನಾನದ ಮತ್ತು ದೇಹದ ಉತ್ಪನ್ನಗಳನ್ನು ಖರೀದಿಸುತ್ತಾರೆ.
- ಸಾವಯವ ಬಟ್ಟೆಗಳಿಗೆ ಬದಲಾಯಿಸಿ: ಬೆಡ್‌ಶೀಟ್‌ಗಳು ಮತ್ತು ಟವೆಲ್‌ಗಳನ್ನು ಬದಲಾಯಿಸುವ ಸಮಯ ಬಂದಾಗ, ಸಾವಯವ ಬಟ್ಟೆಗಳನ್ನು ಆಯ್ಕೆ ಮಾಡುವುದರಿಂದ ಕ್ರಿಮಿನಾಶಕಗಳು, ಕೀಟನಾಶಕಗಳು ಮತ್ತು ಜನರು ಮತ್ತು ಪರಿಸರಕ್ಕೆ ಹಾನಿಕರವಾದ ಇತರ ವಿಷಪದಾರ್ಥಗಳನ್ನು ತಡೆಗಟ್ಟಲು ನಿಮಗೆ ಸಹಾಯ ಮಾಡಬಹುದು.
ನೀರನ್ನು ಸಂರಕ್ಷಿಸಿ
ತಾಜಾ, ಶುದ್ಧ ನೀರು ಸೀಮಿತ ಸಂಪನ್ಮೂಲವಾಗಿರುವುದರಿಂದ, ನೀವು ಮತ್ತು ನಿಮ್ಮ ಗೆಸ್ಟ್‌ಗಳು ಎಷ್ಟು ನೀರನ್ನು ಬಳಸುತ್ತೀರಿ ಎಂಬುದನ್ನು ಗಮನದಲ್ಲಿರಿಸಿಕೊಳ್ಳುವುದು ಮುಖ್ಯವಾಗಿದೆ, ವಿಶೇಷವಾಗಿ ಹವಾಮಾನ ಬಿಕ್ಕಟ್ಟು ಹೆಚ್ಚು ಬರಗಾಲಕ್ಕೆ ಕಾರಣವಾಗುತ್ತಿರುವುದರಿಂದ ಇದು ಮುಖ್ಯ. ನೀರನ್ನು ಸಂರಕ್ಷಿಸಲು ಕೆಲವು ಪ್ರಯೋಜನಕಾರಿ ಮಾರ್ಗಗಳು ಇಲ್ಲಿವೆ:
- ಗೆಸ್ಟ್‌ಗಳಿಗೆ ಜ್ಞಾಪನೆಗಳನ್ನು ನೀಡಿ: ನಿಮ್ಮ ಶವರ್ ಅವಧಿಯಲ್ಲಿ ಒಂದು ನಿಮಿಷವನ್ನು ಕಡಿತಗೊಳಿಸುವುದರಿಂದ, ಪ್ರತಿ ನಿಮಿಷಕ್ಕೆ ಒಂದು ಗ್ಯಾಲನ್** ನೀರನ್ನು ಉಳಿಸಬಹುದು. ಗೆಸ್ಟ್‌ಗಳು ಹಲ್ಲುಜ್ಜುವಾಗ ನೀರನ್ನು ಆಫ್ ಮಾಡಿರುವುದನ್ನು ಪ್ರೋತ್ಸಾಹಿಸುವುದಕ್ಕಾಗಿ ಇಟಲಿಯ ಮಿಲಾನ್‌ನಲ್ಲಿರುವ ಸೂಪರ್‌ಹೋಸ್ಟ್ ಆಂಟೊನೆಲ್ಲಾ, ನಲ್ಲಿಗಳ ಬಳಿ ಟಿಪ್ಪಣಿಗಳನ್ನು ಪೋಸ್ಟ್ ಮಾಡುತ್ತಾರೆ. ಕಡಿಮೆ ಅವಧಿಯಲ್ಲಿ ಶವರ್ ಮಾಡುವುದಕ್ಕೆ ನೀವು ಗೆಸ್ಟ್‌ಗಳನ್ನು ಪ್ರೋತ್ಸಾಹಿಸಬಹುದು.
- ಸೋರಿಕೆಗಳಿವೆಯೇ ಪರಿಶೀಲಿಸಿ: ನೀರನ್ನು ಬಳಸುವ ಶೌಚಾಲಯಗಳು, ಸಿಂಕ್‌ಗಳು, ಟಬ್‌ಗಳು ಮತ್ತು ಉಪಕರಣಗಳ ಆಸುಪಾಸಿನ ಪ್ರದೇಶಗಳನ್ನು ನಿಯಮಿತವಾಗಿ ಪರಿಶೀಲಿಸುವುದು, ಸೋರಿಕೆಗಳನ್ನು ಪತ್ತೆಹಚ್ಚಲು ನಿಮಗೆ ಸಹಾಯ ಮಾಡುತ್ತದೆ. ನೀವು ಎಷ್ಟು ನೀರನ್ನು ಬಳಸುತ್ತಿದ್ದೀರಿ ಎಂಬುದನ್ನು ಸ್ಮಾರ್ಟ್ ವಾಟರ್ ಮೀಟರ್ ಟ್ರ್ಯಾಕ್ ಮಾಡಬಹುದು ಮತ್ತು ಅಸಹಜ ಚಟುವಟಿಕೆ ಇದ್ದಲ್ಲಿ ನಿಮಗೆ ತಿಳಿಸಬಹುದು—ಉದಾಹರಣೆಗೆ, ನೀವು ಅಡುಗೆಮನೆಯ ನಲ್ಲಿಯನ್ನು ಆಫ್ ಮಾಡಲು ಮರೆತಿರಬಹುದು ಅಥವಾ ಡಿಶ್‌ವಾಷರ್‌ನಲ್ಲಿ ನೀರು ಸೋರಿಕೆಯಾಗಿರಬಹುದು.
- ಕಾರ್ಯ ಸಮರ್ಥ ಸೆಟ್ಟಿಂಗ್‌ಗಳು ಮತ್ತು ಉಪಕರಣಗಳನ್ನುಬಳಸಿ: ವಾಷಿಂಗ್ ಮಷೀನುಗಳು ಮತ್ತು ಡಿಶ್‌ವಾಷರ್‌ಗಳು ಬಹಳಷ್ಟು ನೀರನ್ನು ಬಳಸುತ್ತವೆ. ನಿಮ್ಮ ಸ್ಥಳವು ಅವುಗಳನ್ನು ಹೊಂದಿದ್ದರೆ, ತ್ವರಿತ-ವಾಶ್ ಅಥವಾ ಪರಿಸರ ಸ್ನೇಹಿ ಸೆಟ್ಟಿಂಗ್‌ಗಳನ್ನು ಬಳಸುವಂತೆ ಗೆಸ್ಟ್‌ಗಳನ್ನು ಪ್ರೋತ್ಸಾಹಿಸಿ. ಮತ್ತು ಯಂತ್ರವನ್ನು ಬದಲಾಯಿಸುವ ಸಮಯ ಬಂದಾಗ, ಕಡಿಮೆ ನೀರನ್ನು ಬಳಸುವಂತಹ ಇಂಧನ-ದಕ್ಷತೆ ಇರುವಂತಹದನ್ನು ಆರಿಸಿಕೊಳ್ಳಿ.
- ಕಡಿಮೆ ಹರಿವಿನ ಫಿಕ್ಸ್‌ಚರ್‌ಗಳನ್ನು ಸ್ಥಾಪಿಸಿ: ಕಡಿಮೆ ಹರಿವಿನ ನಲ್ಲಿಗಳು ಮತ್ತು ಕಡಿಮೆ ಹರಿವಿನ ಅಥವಾ ಡ್ಯುಯಲ್-ಫ್ಲಶ್ ಟಾಯ್ಲೆಟ್‌ಗಳನ್ನು ಸ್ಥಾಪಿಸುವ ಮೂಲಕವೂ ನೀವು ವ್ಯತ್ಯಾಸವನ್ನು ಮಾಡಬಹುದು. ಆಸ್ಟ್ರೇಲಿಯಾದ ತಾಸ್ಮೆನಿಯಾದಲ್ಲಿರುವ ಸೂಪರ್‌ಹೋಸ್ಟ್ ಮೆರಿಡಿತ್ ಅವರು ವಿಶೇಷವಾದ ಶವರ್ ಹೆಡ್ ಅನ್ನು ಹೊಂದಿದ್ದು, ಅದು ನೀರಿನ ಹರಿವು ಕಡಿಮೆ ಇರುವಾಗಲೇ ಹೆಚ್ಚಿನ ಪ್ರೆಷರ್ ಹೊಂದಿರುತ್ತದೆ.
ಮುಂದೆ: ಮರುಬಳಕೆ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಬಗ್ಗೆ ತಿಳಿಯಿರಿ
*ಇದುಆಗಸ್ಟ್ 2018 ರಿಂದ ಆಗಸ್ಟ್ 2019 ರವರೆಗೆ ಶೀರ್ಷಿಕೆಗಳು ಮತ್ತು ಲಿಸ್ಟಿಂಗ್ ವಿವರಣೆಗಳಲ್ಲಿ ನಿರ್ದಿಷ್ಟವಾದ ಕೀವರ್ಡ್‌ಗಳು (ಪರಿಸರ-ಸ್ನೇಹಿ, ಪರಿಸರೀಯ, ಇತ್ಯಾದಿ) ಸೇರಿದಂತೆ ಲಿಸ್ಟಿಂಗ್‌ಗಳಿಗೆ ಗೆಸ್ಟ್‌ಗಳ ಆಗಮನಗಳ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯ Airbnb ಆಂತರಿಕ ಡೇಟಾ ಆಧಾರಿತವಾಗಿದೆ
**ಮಾರ್ಚ್ 5, 2021 ರಂದು ಪ್ರಕಟಿಸಲಾಗಿರುವ ವಿಶ್ವ ವನ್ಯಜೀವಿ ಫಂಡ್‌ನ 60 ಆ್ಯಕ್ಷನ್ಸ್ ಫಾರ್ ಪ್ಲ್ಯಾನೆಟ್ನಿಂದ
ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.
ವಿಶೇಷ ಆಕರ್ಷಣೆಗಳು
ಇಂಧನ-ಸಮರ್ಥ ವಸ್ತುಗಳಲ್ಲಿ ಹೂಡಿಕೆ ಮಾಡುವುದರಿಂದ ಅಂತಿಮವಾಗಿ ನಿಮ್ಮ ಹಣವನ್ನು ಉಳಿಸಬಹುದು
ತೊಳೆಯಬಹುದಾದ ಶುಚಿಗೊಳಿಸುವಿಕೆ ಬಟ್ಟೆಗಳಂತಹ ಸುಸ್ಥಿರ ಗೃಹಬಳಕೆಯ ಅವಶ್ಯಕ ವಸ್ತುಗಳಿಗೆ ಬದಲಾಯಿಸುವುದರಿಂದ ನಿಮ್ಮ ಪರಿಸರದ ಹೆಜ್ಜೆಗುರುತನ್ನು ಕಡಿಮೆ ಮಾಡಬಹುದು
ಕಡಿಮೆ ಹರಿವಿನ ಫಿಕ್ಸ್ಚರ್‌ಗಳನ್ನು ಅಳವಡಿಸುವುದು ನೀರನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ