
ಪ್ರವಾಸಿಗರ ಸಂಪನ್ಮೂಲಗಳು
ಜನಪ್ರಿಯ ವಿಷಯಗಳು
Airbnb ಖಾತೆಗೆ ನಾನು ಹೇಗೆ ಸೈನ್ ಅಪ್ ಮಾಡುವುದು?
ಒಲಿಂಪಿಕ್ & ಪ್ಯಾರಾಲಿಂಪಿಕ್ ಪಾಲುದಾರಿಕೆಯ ಭಾಗವಾಗಿ ನಿಮ್ಮ Airbnb ಖಾತೆಗೆ ಸೈನ್ ಅಪ್ಮಾಡುವುದು
ಕ್ರಮ 1: ಸೈನ್ ಅಪ್ ಈ ಪುಟದ ಮೇಲಿನ ಬಲ ಮೂಲೆಯಲ್ಲಿರುವ "ಸೈನ್ ಅಪ್" ಮೇಲೆ ಕ್ಲಿಕ್ ಮಾಡಿ . ನಿಮ್ಮ ಕೆಲಸದ ಇಮೇಲ್ ವಿಳಾಸವನ್ನು ಹಾಕಿ. ನೀವು ಈಗಾಗಲೇ Airbnb ಖಾತೆಯನ್ನುಹೊಂದಿದ್ದರೆ, ನಿಮ್ಮ ಫೋನ್ # ಅಥವಾ ಒದಗಿಸಿದ ಯಾವುದೇ ಲಾಗ್ ಇನ್ ವಿಧಾನಗಳನ್ನು ಬಳಸಿಕೊಂಡು ಅದಕ್ಕೆ ಲಾಗ್ ಇನ್ ಮಾಡಿ. Airbnb ಖಾತೆಯನ್ನು ಹೊಂದಿಲ್ಲದಿದ್ದರೆ, ನಿಮ್ಮ ಫೋನ್ # ಅಥವಾ ಒದಗಿಸಿದ ಯಾವುದೇ ಇತರ ವಿಧಾನಗಳನ್ನು ಬಳಸಿ ಒಂದನ್ನು ರಚಿಸಿ. ನೀವು ಈಗಾಗಲೇ Airbnb ಖಾತೆಯನ್ನು ಹೊಂದಿದ್ದರೆ ಹೆಚ್ಚುವರಿ ಖಾತೆಯನ್ನು ರಚಿಸಬೇಡಿ. ಕ್ರಮ 2: ನಿಮ್ಮ ಪ್ರೊಫೈಲ್ ಅನ್ನು ಪೂರ್ಣಗೊಳಿಸಿ ನೀವು ಸೈನ್ ಅಪ್ ಮಾಡಿದ ನಂತರ, ಈ ಕೆಳಗಿನ ಮಾಹಿತಿಯನ್ನು ಒಳಗೊಂಡಿರುವ ರಿಸರ್ವೇಶನ್ ಬುಕ್ ಮಾಡುವ ಮೊದಲು ನಿಮ್ಮ Airbnbಖಾತೆಯನ್ನು ಪೂರ್ಣಗೊಳಿಸಲು ಮರೆಯದಿರಿ:- ಪೂರ್ಣ ಹೆಸರು
- ಇಮೇಲ್ ವಿಳಾಸ
- ದೃಢೀಕರಿಸಿದ ದೂರವಾಣಿ ಸಂಖ್ಯೆ
- ಪರಿಚಯಾತ್ಮಕ ಸಂದೇಶ
- ಮನೆಯ ನಿಯಮಗಳಿಗೆ ಒಪ್ಪಂದ
- ಹಣಪಾವತಿ ಮಾಹಿತಿ
ನನ್ನ ಕೆಲಸದ ಇಮೇಲ್ ಅನ್ನು ನಾನು ಹೇಗೆ ಲಿಂಕ್ ಮಾಡುವುದು?
ಕ್ರಮ 1: ಸೈನ್ ಅಪ್ ಮಾಡಿ
ಈ ಪುಟದ ಮೇಲಿನ ಬಲ ಮೂಲೆಯಲ್ಲಿರುವ "ಸೈನ್ ಅಪ್ ಮಾಡಿ" ಕ್ಲಿಕ್ ಮಾಡಿ. ನಿಮ್ಮ ಕೆಲಸದ ಇಮೇಲ್ ವಿಳಾಸವನ್ನು ನಮೂದಿಸಿ. ನೀವು ಈಗಾಗಲೇ Airbnb ಖಾತೆಯನ್ನುಹೊಂದಿದ್ದರೆ, ನಿಮ್ಮ ಫೋನ್ # ಅಥವಾ ಒದಗಿಸಿದ ಯಾವುದೇ ಲಾಗ್ ಇನ್ ವಿಧಾನಗಳನ್ನು ಬಳಸಿಕೊಂಡು ಅದಕ್ಕೆ ಲಾಗ್ ಇನ್ ಮಾಡಿ. Airbnb ಖಾತೆಯನ್ನು ಹೊಂದಿಲ್ಲದಿದ್ದರೆ, ನಿಮ್ಮ ಫೋನ್ # ಅಥವಾ ಒದಗಿಸಲಾದ ಯಾವುದೇ ಇತರ ವಿಧಾನಗಳನ್ನು ಬಳಸಿ ಒಂದನ್ನು ರಚಿಸಿ. ನೀವು ಈಗಾಗಲೇ Airbnb ಖಾತೆಯನ್ನು ಹೊಂದಿದ್ದರೆ ಇನೊಂದನ್ನು ರಚಿಸಬೇಡಿ. ಕ್ರಮ 2: ನಿಮ್ಮ ಪ್ರೊಫೈಲ್ ಅನ್ನು ಪೂರ್ಣಗೊಳಿಸಿ ನೀವು ಸೈನ್ ಅಪ್ ಮಾಡಿದ ನಂತರ, ರಿಸರ್ವೇಶನ್ ಬುಕ್ ಮಾಡುವ ಮೊದಲು ನಿಮ್ಮ ಖಾತೆಯನ್ನು ಪೂರ್ಣಗೊಳಿಸಲು ಮರೆಯದಿರಿ. ರಿಸರ್ವೇಶನ್ ಬುಕ್ ಮಾಡಲು, ಗೆಸ್ಟ್ಗಳು ಇವುಗಳನ್ನು ಒಳಗೊಂಡಿರಬೇಕು:- ಪೂರ್ಣ ಹೆಸರು
- ಇಮೇಲ್ ವಿಳಾಸ
- ದೃಢೀಕರಿಸಿದ ದೂರವಾಣಿ ಸಂಖ್ಯೆ
- ಪರಿಚಯಾತ್ಮಕ ಸಂದೇಶ
- ಮನೆಯ ನಿಯಮಗಳಿಗೆ ಒಪ್ಪಂದ
- ಹಣಪಾವತಿ ಮಾಹಿತಿ
ಪರಿಗಣಿತ ಅತಿಥಿಯಾಗಿರುವುದು ಹೇಗೆ
Airbnb ನೊಂದಿಗೆ ಪ್ರಯಾಣಿಸುವುದರಿಂದ ಇತರ ಜನರ ಮನೆಗಳಲ್ಲಿ ಉಳಿಯಲು ಮತ್ತು Airbnb ಸಮುದಾಯದ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಒದಗಿಸುತ್ತದೆ. ನಿಮಗೆ ತಯಾರಾಗಲು ಸಹಾಯ ಮಾಡಲು, Airbnb ಯೊಂದಿಗೆ ನಿಮ್ಮ ಅನುಭವವನ್ನು ಹೆಚ್ಚಿಸಲು ಕೆಲವು ಸಲಹೆಗಳು ಇಲ್ಲಿವೆ.
ನೀವು ಬುಕ್ ಮಾಡುವ ಮೊದಲು- ನಿಮ್ಮ Airbnb ಪ್ರೊಫೈಲ್ನಲ್ಲಿ ಸಣ್ಣ ಬಯೋ ರಚಿಸಿ ಮತ್ತು ನಿಮ್ಮ ಇಮೇಲ್ ವಿಳಾಸ, ಫೋನ್ ಸಂಖ್ಯೆ ಮತ್ತು ಸರ್ಕಾರಿ ID ಸೇರಿದಂತೆ ನಿಮ್ಮ ಮಾಹಿತಿಯು ನವೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಿ.
- ಕೂಡಿ ವಾಸದಿಂದ ಹಿಡಿದು ಸಂಪೂರ್ಣ ಮನೆಗಳವರೆಗೆ Airbnb ವೈವಿಧ್ಯಮಯ ಲಿಸ್ಟಿಂಗ್ಗಳನ್ನು ಹೊಂದಿದೆ. ಸ್ಥಳ, ಮನೆ ನಿಯಮಗಳು, ಮತ್ತು ಹೋಸ್ಟಿಂಗ್ ಶೈಲಿ ನಿಮ್ಮ ಅಗತ್ಯಗಳಿಗೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಿ.
- ಸ್ಥಳವು ನಿಮಗೆ ಉತ್ತಮ ಹೊಂದಾಣಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಹೋಸ್ಟ್ನ ಲಿಸ್ಟಿಂಗ್ಅನ್ನು ಸ್ವಲ್ಪ ಸಮಯ ಪರಿಶೀಲಿಸಿ.
- ಲಿಸ್ಟಿಂಗ್ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳೊಂದಿಗೆ ಹೋಸ್ಟ್ಅನ್ನು ಸಂಪರ್ಕಿಸಲು ಹಿಂಜರಿಯಬೇಡಿ.
- ನಿಮ್ಮ ಯಾವುದೇ ನಿರೀಕ್ಷೆಗಳು ಅಥವಾ ವಿಶೇಷ ಅವಶ್ಯಕತೆಗಳ ಬಗ್ಗೆ ನಿಮ್ಮ ಹೋಸ್ಟ್ ಜೊತೆಗೆ ಸ್ಪಷ್ಟವಾಗಿ ಸಂವಹನ ನಡೆಸಿ.
- ನಿಮ್ಮ ಅಂದಾಜು ಆಗಮನದ ಸಮಯವನ್ನು ನಿಮ್ಮ ಹೋಸ್ಟ್ಗೆ ತಿಳಿಸಲು ನಾವು ಶಿಫಾರಸು ಮಾಡುತ್ತೇವೆ.
- ಒದಗಿಸಿದ ಮನೆಯ ನಿಯಮಗಳನ್ನು ಗೌರವಿಸಿ.
- ನೀವು ಸ್ನೇಹಿತರೊಂದಿಗೆ ಉಳಿದುಕೊಂಡಿರುವಂತೆ ನಿಮ್ಮ ಹೋಸ್ಟ್ನ ಮನೆಯನ್ನು ಆನಂದಿಸಿ. ನಿಮ್ಮ ನೆರೆಹೊರೆಯವರನ್ನು ಗೌರವಿಸಿ.
- ನೆರೆಹೊರೆಯನ್ನು ಅನ್ವೇಷಿಸಿ ಮತ್ತು ಸ್ಥಳೀಯ ವ್ಯವಹಾರಗಳನ್ನು ಬೆಂಬಲಿಸಿ. ಸ್ಥಳೀಯರಂತೆ ಭಾಸವಾಗಲು ಇದು ಉತ್ತಮ ಮಾರ್ಗವಾಗಿದೆ. ನಿಮ್ಮ ಹೋಸ್ಟ್ಗೆ ಅವರ ನೆಚ್ಚಿನ ನೆರೆಹೊರೆಯ ತಾಣಗಳ ಕುರಿತು ಕೇಳಲು ಪ್ರಯತ್ನಿಸಿ!
- ಗೆಸ್ಟ್ಗಳನ್ನು ಕರೆ ತರುವ ಮೊದಲು ನಿಮ್ಮ ಹೋಸ್ಟ್ನ ಅನುಮತಿ ಪಡೆಯಿರಿ.
- ಸಂದೇಹವಿದ್ದಲ್ಲಿ, ಉದ್ಭವಿಸುವ ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳೊಂದಿಗೆ ನಿಮ್ಮ ಹೋಸ್ಟ್ಅನ್ನು ಸಂಪರ್ಕಿಸಿ.
- ಭವಿಷ್ಯದ ಗೆಸ್ಟ್ಗಳಿಗೆ ಮಾರ್ಗದರ್ಶನ ನೀಡುವುದಕ್ಕೆ ಸಹಾಯವಾಗುವಂತೆ ಯಾವಾಗಲೂ ನಿಮ್ಮ ಹೋಸ್ಟ್ಗೆ ಪ್ರಾಮಾಣಿಕ ವಿಮರ್ಶೆಯನ್ನು ನೀಡಿ. Airbnb ಯನ್ನು ಸಮುದಾಯದ ಮೇಲೆ ನಿರ್ಮಿಸಲಾಗಿದೆ. ನಿಮಗಾಗಿ ವಿಮರ್ಶೆಯನ್ನು ನೀಡಲು ನಿಮ್ಮ ಹೋಸ್ಟ್ ಅನ್ನು ಸಹ ಆಹ್ವಾನಿಸಲಾಗುತ್ತದೆ.
ರಿಸರ್ವೇಶನ್ ಮಾಡುವ ಮೊದಲು ಹೋಸ್ಟ್ಗೆ ಹೇಗೆ ಸಂದೇಶ ಕಳುಹಿಸುವುದು
ನೀವು ಲಿಸ್ಟಿಂಗ್ ಅಥವಾ ಹೋಸ್ಟ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, Airbnb ಯ ವೆಬ್ಸೈಟ್ನಲ್ಲಿ ಹೋಸ್ಟ್ಗೆ ಸಂದೇಶ ಕಳುಹಿಸಬಹುದು.
ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ ಮತ್ತು ನೀವು ಸಂಪರ್ಕಿಸಲು ಬಯಸುವ ಹೋಸ್ಟ್ನ ಲಿಸ್ಟಿಂಗ್ಗೆ ಹೋಗಿ. ಲಿಸ್ಟಿಂಗ್ ಪುಟದಲ್ಲಿಹೋಸ್ಟ್ ಅನ್ನು ಸಂಪರ್ಕಿಸಿಅನ್ನು ಕ್ಲಿಕ್ ಮಾಡಿ ಅಥವಾ ಒತ್ತಿ. ನಿಮ್ಮ ವಾಸ್ತವ್ಯದಿಂದ ಏನನ್ನು ನಿರೀಕ್ಷಿಸಬಹುದು ಎನ್ನುವುದರ ಅಡಿಯಲ್ಲಿ ಮಾಹಿತಿಯನ್ನು ಪರಿಶೀಲಿಸಿ. ನೀವು ಇನ್ನೂ ನಿಮ್ಮ ಹೋಸ್ಟ್ಅನ್ನು ಸಂಪರ್ಕಿಸಲು ಬಯಸಿದಲ್ಲಿ, ನಿಮ್ಮ ಸಂದೇಶವನ್ನು ಪಠ್ಯ ಕ್ಷೇತ್ರದಲ್ಲಿ ಟೈಪ್ ಮಾಡಿ ಮತ್ತು ಸಂದೇಶ ಕಳುಹಿಸಿ ಬಟನ್ ಕ್ಲಿಕ್ ಅಥವಾ ಟ್ಯಾಪ್ ಮಾಡಿ.Airbnbಅನ್ನು ನಾನು ಹೇಗೆ ಸಂಪರ್ಕಿಸುವುದು?
ಹೆಚ್ಚಿನ ಹೋಸ್ಟ್ ಗಳು ಮತ್ತು ಗೆಸ್ಟ್ ಗಳು ತಮ್ಮದೇ ಆದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಾಧ್ಯವಾಗುತ್ತದೆ. ಟ್ರಿಪ್ಗೆ ಮೊದಲು, ಟ್ರಿಪ್ ನಡೆಯುತ್ತಿರುವಾಗ, ಅಥವಾ ನಂತರ ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಲು ಕೆಲವು ಮಾರ್ಗಗಳು ಇಲ್ಲಿವೆ:ಸಹಾಯ ಕೇಂದ್ರದಲ್ಲಿ, ಮರುಪಾವತಿಗಳು, ವಿಮರ್ಶೆಗಳು, ಪಾವತಿಗಳು, ಮತ್ತು ರದ್ದತಿಗಳು ಸೇರಿದಂತೆ ಜನಪ್ರಿಯ ವಿಷಯಗಳ ಬಗ್ಗೆ ಪ್ರಶ್ನೆಗಳಿಗೆ ನೀವು ತಕ್ಷಣದ ಉತ್ತರಗಳನ್ನು ಪಡೆಯಬಹುದು. ನಿಮ್ಮ ಹೋಸ್ಟ್ ಅಥವಾ ಗೆಸ್ಟ್ಅನ್ನು ಸಂಪರ್ಕಿಸಿ ಪರಸ್ಪರ ನೇರವಾಗಿ ಸಂವಹನ ಮಾಡುವ ಮೂಲಕ ನಿಮ್ಮ ಲಿಸ್ಟಿಂಗ್ ಅಥವಾ ರಿಸರ್ವೇಶನ್ ಸಮಸ್ಯೆಯನ್ನು ಪರಿಹರಿಸಿ. ಪರಿಹಾರವನ್ನು ಕಂಡುಕೊಳ್ಳಲು ಇದು ಸಾಮಾನ್ಯವಾಗಿ ತ್ವರಿತ ಮತ್ತು ಸುಲಭವಾದ ಮಾರ್ಗವಾಗಿದೆ. ನಿಮ್ಮ ಗೆಸ್ಟ್ ಅಥವಾ ಹೋಸ್ಟ್ಗೆ ಸಂದೇಶವನ್ನು ಕಳುಹಿಸಿ, ಅಥವಾ ಅವರಿಗೆ ಕರೆ ಮಾಡಲು ಪ್ರಯತ್ನಿಸಿ. ರೆಸಲ್ಯೂಶನ್ ಕೇಂದ್ರಕ್ಕೆ ಹೋಗಿ ನಿಮ್ಮ ರಿಸರ್ವೇಶನ್ ವೆಚ್ಚದಲ್ಲಿ ಸೇರಿಸದ ಯಾವುದನ್ನಾದರೂ ನೀವು ಕಳುಹಿಸಬೇಕಾದರೆ ಅಥವಾ ವಿನಂತಿಸಬೇಕಾದರೆ, Airbnb ಮೂಲಕ ಹಣವನ್ನು ಸುರಕ್ಷಿತವಾಗಿ ಕಳುಹಿಸಲು ಅಥವಾ ವಿನಂತಿಸಲು ರೆಸಲ್ಯೂಶನ್ ಕೇಂದ್ರವನ್ನು ಬಳಸಿ. ನಿಮ್ಮ ಗೆಸ್ಟ್ ಅಥವಾ ಹೋಸ್ಟ್ ಜೊತೆ ವಿವರಗಳನ್ನು ಪಡೆಯಲು ನಿಮಗೆ ಸಹಾಯ ಬೇಕಿದ್ದಲ್ಲಿ ನಾವು ಸಹಾಯ ಮಾಡುತ್ತೇವೆ. Airbnbಅನ್ನು ಸಂಪರ್ಕಿಸಿ ನಿಮಗೆ ಇನ್ನೂ ಸಹಾಯ ಬೇಕಿದ್ದಲ್ಲಿ, ಫೋನ್, ಇಮೇಲ್, ಅಥವಾ ಚಾಟ್ ಮೂಲಕ ಸಹಾಯ ಪಡೆಯಲು ನಮ್ಮ ಸಂಪರ್ಕ ಪುಟಕ್ಕೆ ಹೋಗಿ.
ಸಹಾಯ ಕೇಂದ್ರದಲ್ಲಿ ಉತ್ತರಗಳನ್ನು ಪಡೆಯಿರಿ © 2023 Airbnb
© 2023 Airbnb