

ಜಗತ್ತನ್ನು ಹೋಸ್ಟ್ ಮಾಡಿ.
ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳು ಪಟ್ಟಣಕ್ಕೆ ಬಂದಾಗ, ವಿಶ್ವದ ವಿವಿಧೆಡೆಯಿಂದ ಬರುವ ಅತಿಥಿಗಳನ್ನು ಸ್ಥಳೀಯರು ಸ್ವಾಗತಿಸುತ್ತಾರೆ. Airbnb ಮೂಲಕ, ವಿಶ್ವದ ಪ್ರಮುಖ ಕ್ರೀಡಾ ಸ್ಪರ್ಧೆಯ ಸಾಮೂಹಿಕ ಉತ್ಸಾಹದಲ್ಲಿ ನಿಮ್ಮ ನಗರ ಮತ್ತು ನಿಮ್ಮ ಮನೆಯನ್ನು ನೀವು ಹಂಚಿಕೊಳ್ಳಬಹುದು.
2028ರ ವೇಳೆಗೆ ಒಲಿಂಪಿಕ್ ಚಳವಳಿಯನ್ನು ಬೆಂಬಲಿಸಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಜೊತೆಗಿನ ನಮ್ಮ ಪಾಲುದಾರಿಕೆಯ ಬಗ್ಗೆ Airbnb ಉತ್ಸುಕವಾಗಿದೆ. ಒಂಬತ್ತು ವರ್ಷಗಳ, ಐದು-ಆಟಗಳ ಪಾಲುದಾರಿಕೆಯು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಲ್ಲಿ ಕ್ರೀಡಾಪಟುಗಳು ಮತ್ತು ಅವರ ಅಭಿಮಾನಿಗಳಿಗೆ ಅಂತರರಾಷ್ಟ್ರೀಯ ಪ್ರಯಾಣದ ಅನುಭವಗಳನ್ನು ಪ್ರೋತ್ಸಾಹಿಸುತ್ತದೆ. ಕ್ರೀಡಾಪಟುಗಳನ್ನು ಬೆಂಬಲಿಸುವುದು

Airbnb ಕ್ರೀಡಾಪಟು ಪ್ರಯಾಣ ಅನುದಾನ
ಕ್ರೀಡಾಪಟುಗಳು ತಾವು ತರಬೇತಿ ಪಡೆಯುವ ಮತ್ತು ಸ್ಪರ್ಧಿಸುವ ಸ್ಥಳಕ್ಕೆ ಹತ್ತಿರದಲ್ಲಿಯೇ ಇರುವುದನ್ನು Airbnb ಶ್ಲಾಘಿಸುತ್ತದೆ. ಅದಕ್ಕಾಗಿಯೇ ನಾವು ಅರ್ಹ ಕ್ರೀಡಾಪಟುಗಳಿಗೆ USD $2000 ಮೌಲ್ಯದ ಕ್ರೀಡಾಪಟು ಪ್ರಯಾಣ ಅನುದಾನ (ಅಥ್ಲೀಟ್ ಟ್ರಾವೆಲ್ ಗ್ರ್ಯಾಂಟ್) ಅನ್ನು ನೀಡುತ್ತಿದ್ದೇವೆ. ಈ ಅನುದಾನದ ಬೆಂಬಲದೊಂದಿಗೆ, ವಿಶ್ವದ 1,000 ಅತ್ಯುತ್ತಮ ಒಲಿಂಪಿಯನ್‌ಗಳು ಮತ್ತು ಪ್ಯಾರಾಲಿಂಪಿಯನ್‌ಗಳು ವಸತಿ ಸೌಕರ್ಯಗಳಿಗೆ ಅನುದಾನವನ್ನು ಬಳಸಿಕೊಂಡು ತಮ್ಮ ತರಬೇತಿ ಮತ್ತು ಅರ್ಹತಾ ವೆಚ್ಚಗಳಿಗೆ Airbnb ಯಲ್ಲಿ ಹೆಚ್ಚುವರಿ ಸಹಾಯವನ್ನು ಪಡೆಯಬಹುದು.

Airbnb500 ಪ್ರಯಾಣ ನಿಧಿ
ಒಲಿಂಪಿಯನ್‌ಗಳು ಮತ್ತು ಪ್ಯಾರಾಲಿಂಪಿಯನ್‌ಗಳು ಮಾಡುವ ಪ್ರಯತ್ನಗಳು ಮತ್ತು ಸಾಧನೆಗಳಿಗಾಗಿ ಗೌರವಿಸಲು, USD $500 ಮೌಲ್ಯದ ಸಂಭ್ರಮಾಚರಣೆಯ ಪ್ರಯಾಣ ನಿಧಿ (ಟ್ರಾವೆಲ್ ಫಂಡ್) ನೀಡುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ. ಅರ್ಹ ಕ್ರೀಡಾಪಟುಗಳು ಹೊಸ ಡೆಸ್ಟಿನೇಶನ್ ಅನ್ನು ಅನ್ವೇಷಿಸಲು ಮತ್ತು ಸ್ವಲ್ಪ ಸಮಯ ವಿರಾಮ ಪಡೆಯಲು ಹಾಗೂ ಇತ್ಯಾದಿಗೆ Airbnb ವಸತಿ ಸೌಕರ್ಯಗಳಿಗಾಗಿ ಈ ಫಂಡ್ ಅನ್ನು ಅನ್ವಯಿಸಬಹುದು. Airbnb500 ಸ್ವೀಕರಿಸಲು, ನೀವು Athlete365 ನಲ್ಲಿ ಆಫರ್ ಅನ್ನು ಕ್ಲೈಮ್ ಮಾಡುವುದಕ್ಕಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ನಿರ್ದಿಷ್ಟ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.
ಆಟಗಳನ್ನು ಬೆಂಬಲಿಸುವುದು

ಸ್ಥಳೀಯರಿಗೆ ಉತ್ತಮವಾಗಿದೆ
ನೂರಾರು, ಸಾವಿರಾರು ಹೊಸ ಹೋಸ್ಟ್‌ಗಳು ಮುಂದಿನ ಒಂಬತ್ತು ವರ್ಷಗಳಲ್ಲಿ ಪ್ಯಾರಿಸ್, ಮಿಲಾನೊ-ಕಾರ್ಟಿನಾ ಮತ್ತು ಲಾಸ್ ಏಂಜಲೀಸ್‌ಗೆ ಭೇಟಿ ನೀಡುವ ಕ್ರೀಡಾಪಟುಗಳು ಮತ್ತು ಅಭಿಮಾನಿಗಳಿಗೆ ವಸತಿ ಮತ್ತು ಅಸಲಿ ಸ್ಥಳೀಯ ಅನುಭವಗಳನ್ನು ಒದಗಿಸುತ್ತಾರೆ. ಸಂದರ್ಶಕರ ಹೆಚ್ಚಳಕ್ಕೆ ಅವಕಾಶ ಕಲ್ಪಿಸುವ ಮಾರ್ಗಗಳನ್ನು ನೀಡಲು Airbnb ಸಮುದಾಯವು ಹೆಮ್ಮೆಪಡುತ್ತದೆ ಮತ್ತು ನಮ್ಮ ಪಾಲುದಾರಿಕೆಯು ಸ್ಥಳೀಯ ಹೋಸ್ಟ್‌ಗಳು ಮತ್ತು ಸಮುದಾಯಗಳಿಗೆ ನೇರ ಆದಾಯವನ್ನು ಒದಗಿಸುತ್ತದೆ.

ಒಲಿಂಪಿಕ್ ಚಳುವಳಿ
ಒಲಿಂಪಿಸಂ ಅನ್ನು ಉತ್ತೇಜಿಸುವ ತನ್ನ ಧ್ಯೇಯದಲ್ಲಿ ನಾವು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಬೆಂಬಲಿಸಲು ಉತ್ಸುಕರಾಗಿದ್ದೇವೆ — ಒಲಿಂಪಿಸಂ ಎನ್ನುವುದು ಜಗತ್ತನ್ನು ಉತ್ತಮವಾಗಿಸಲು ಸಂಸ್ಕೃತಿ ಮತ್ತು ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಸಂಯೋಜಿಸುವ ಜೀವನದ ತತ್ವವಾಗಿದೆ. ಒಲಿಂಪಿಕ್ ಉತ್ಸಾಹವನ್ನು ನಮ್ಮ ಹೋಸ್ಟ್ ಸಮುದಾಯಗಳು ಮುನ್ನಡೆಸುತ್ತವೆ ಎಂಬುದಕ್ಕಿಂತ ಹೆಚ್ಚಿನ ಹೆಮ್ಮೆ ಬೇರೆ ಯಾವುದೂ ಇಲ್ಲ ಮತ್ತು ಇನ್ನೂ ಹೆಚ್ಚು ಒಳಗೊಳ್ಳುವ, ನಿಲುಕಬಲ್ಲ ಮತ್ತು ಸುಸ್ಥಿರ ಆಟಗಳನ್ನು ರಚಿಸಲು ಸಹಾಯ ಮಾಡುವುದಕ್ಕೆ ನಾವು ಬದ್ಧರಾಗಿದ್ದೇವೆ.

ನಿಮ್ಮ ಮನೆಯಲ್ಲಿ ಗೆಸ್ಟ್‌ಗಳನ್ನು ಹೋಸ್ಟ್ ಮಾಡಿ
ನೀವು ಆರಾಮವಾದ ರೂಮ್ ಅಥವಾ ವಿಶಾಲವಾದ ಮನೆಯನ್ನು ಹೊಂದಿದ್ದರೂ, ಆಟಗಳನ್ನು ಆನಂದಿಸಲು ಮತ್ತು ಮರೆಯಲಾಗದ ಸಂಪರ್ಕಗಳನ್ನು ರೂಪಿಸಲು ಸ್ಥಳೀಯರಿಗೆ Airbnb ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ಹೋಸ್ಟ್ ಆಗುವ ಮೂಲಕ, ನೀವು ಆಟದ ಉತ್ಸಾಹಕ್ಕೆ ಕೊಡುಗೆ ನೀಡುವುದಷ್ಟೇ ಅಲ್ಲ, ಸ್ಥಳೀಯ ಸಮುದಾಯವನ್ನೂ ವರ್ಧಿಸುತ್ತೀರಿ. ಸೈನ್ ಅಪ್ ಮಾಡುವುದು ಸುಲಭ ಮತ್ತು ಲಿಸ್ಟಿಂಗ್ ರಚಿಸುವುದು ಉಚಿತ.